ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಅಡಿ ನಗದು ರಹಿತ ಚಿಕಿತ್ಸೆ, ಆನ್ಲೈನ್ ನೋಂದಣಿಗೆ ಗಡುವು, ಯಾರಿಗೆ ಅನ್ವಯ?

 

 

ಸುದ್ದಿ‌ ಕಣಜ.ಕಾಂ | KARNATAKA | HEALTH
ಬೆಂಗಳೂರು:‌ ಕರ್ನಾಟಕ ರಾಜ್ಯ ನೌಕರರು ಹಾಗೂ ಅವಲಂಬಿತರಿಗೆ ಉಚಿತ ಚಿಕಿತ್ಸೆ ನೀಡುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಅನುಷ್ಠಾನಗೊಳಿಸಲು ಕಡ್ಡಾಯವಾಗಿ ಆನ್ಲೈನ್ ಮೂಲಕ ಮಾಹಿತಿ‌ ನೀಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.

READ | ಡಿವಿಎಸ್ ಸಂಜೆ ಕಾಲೇಜಿನಲ್ಲಿ ಪದವಿ ಪ್ರವೇಶ ಆರಂಭ, ಮಾಹಿತಿಗಾಗಿ ಕರೆ ಮಾಡಿ

ಸಂಪೂರ್ಣ ಉಚಿತ ಚಿಕಿತ್ಸೆ ಅವಕಾಶ
ಸರ್ಕಾರಿ‌ ನೌಕರರಿಗೆ ಸಂಪೂರ್ಣ ಉಚಿತ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಇದರ ಸಮಗ್ರ ಅನುಷ್ಠಾನಕ್ಕಾಗಿ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಕಾಯಂ ನೌಕರರು ಹಾಗೂ ಅಧಿಕಾರಿಗಳ ನಿಖರ ಮಾಹಿತಿಯನ್ನು ಆನ್ಲೈನ್ ಮೂಲಕ‌ ಕ್ರೋಡೀಕರಿಸಿ ಉಚಿತ ಆರೋಗ್ಯ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಇಲ್ಲಿ ಮಾಹಿತಿಯನ್ನು‌ ಸಲ್ಲಿಸಿ
ಕೆಜಿಐಡಿ ಸಂಖ್ಯೆ ಹೊಂದಿರುವ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರಾಗಿರುವ ಕಾಯಂ ನೌಕರರು ಹಾಗೂ ಅಧಿಕಾರಿಗಳು ಮಾಹಿತಿಯನ್ನು http://bit.ly/cashlesshealth ಈ‌ ಯು.ಆರ್.ಎಲ್. ಲಿಂಕ್ ಬಳಸಿ ಸೆಪ್ಟೆಂಬರ್ 30ರೊಳಗೆ ಮಾಹಿತಿ ಸಲ್ಲಿಸುವಂತೆ ತಿಳಿಸಲಾಗಿದೆ.

READ | ಬಂಗಾರ ಪ್ರಿಯರಿಗೆ ಶಾಕಿಂಗ್ ಸುದ್ದಿ, ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ದರವೆಷ್ಟು, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಇವರು ಮಾಹಿತಿ ಸಲ್ಲಿಸುವ ಅವಕಾಶವಿಲ್ಲ
ಪೊಲೀಸ್ ಇಲಾಖೆಯಲ್ಲಿ ಈಗಾಗಲೇ ಆರೋಗ್ಯ ಯೋಜನೆ ಜಾರಿಯಲ್ಲಿ ಇರುವುದರಿಂದ ಈ ಇಲಾಖೆಯ ನೌಕರರು ಹಾಗೂ ಅಧಿಕಾರಿಗಳು ಹಾಗೂ ಅನುದಾನಿತ ಸಂಖ್ಯೆ, ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯದ, ಸ್ಥಳೀಯ ಸಂಸ್ಥೆಗಳ ನೌಕರರು, ಅಧಿಕಾರಿಗಳು ಮಾಹಿತಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಮಾಹಿತಿಗಾಗಿ 902135813, 9916489079 ಕರೆ ಮಾಡಬಹುದು.

https://www.suddikanaja.com/2021/09/03/kuvempu-university-convocation/

error: Content is protected !!