ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದಲ್ಲಿ ಇಂದು ನಡೆಯಬೇಕಿದ್ದ ಜಂಬೂ ಸವಾರಿ ರದ್ದಾಗಿದೆ. ಇದಕ್ಕೆ ಕಾರಣ, ಸವಾರಿಯಲ್ಲಿ ಪಾಲ್ಗೊಳ್ಳಬೇಕಿದ್ದ ನೇತ್ರಾವತಿ ಹೆರಿಯಾಗಿರುವುದು.
ಸಾಗರ, ನೇತ್ರಾವತಿ ಮತ್ತು ಹೇಮಾವತಿ ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಅದಕ್ಕಾಗಿ ತಾಲೀಮು ಸಹ ನೀಡಲಾಗಿತ್ತು. ಆದರೆ, ನೇತ್ರಾವತಿ ಹೆರಿಗೆಯಿಂದಾಗಿ ಜಂಬೂ ಸವಾರಿ ನೋಡಲು ಸಿಗುವುದಿಲ್ಲ.
READ | ‘ಕಸರತ್’ ಚಿತ್ರದ ವೆಬ್ ಸಿರೀಸ್ ಪೋಸ್ಟರ್ ರಿಲೀಸ್, ಯಾರೆಲ್ಲ ಪಾತ್ರದಲ್ಲಿದ್ದಾರೆ?
ಭಾನುಮತಿ ಪ್ರೆಗ್ನೆಂಟ್ ಎಂದು ನೇತ್ರಾವತಿ ತರಲಾಗಿತ್ತು
ಭಾನುಮತಿ ಗರ್ಭಿಣಿಯಾಗಿದ್ದರಿಂದ ದಸರಾ ಮೆರವಣಿಗೆಗೆ ಭಾನುಮತಿ ಬದಲು ನೇತ್ರಾವತಿಯನ್ನು ಕರೆದುಕೊಂಡು ಬರಲಾಗಿತ್ತು. ಆದರೆ, ಭಾನುಮತಿಗೂ ಮುನ್ನವೇ ನೇತ್ರಾವತಿ ಹೆಣ್ಣು ಮರಿಗೆ ಜನ್ಮ ನೀಡಿದ್ದಾಳೆ.
ಈ ಹಿಂದೆಯೂ ನಡೆದಿತ್ತು ಘಟನೆ
ಈ ಹಿಂದೆ ಕುಂತಿ ಸಹ ಮೆರವಣಿಗೆಗೆಂದು ಕರೆದುಕೊಂಡು ಬಂದಾಗ ವಾಸವಿ ಶಾಲೆ ಆವರಣದಲ್ಲಿ ಮರಿಹಾಕಿತ್ತು. ಈಗ ನೇತ್ರಾವತಿ ಸಹ ಮರಿ ಹಾಕಿದೆ. ಹೆಣ್ಣು ಮರಿಯನ್ನು ಜನ್ಮ ನೀಡಿರುವ ನೇತ್ರಾವತಿ ಸೇರಿದಂತೆ ಎಲ್ಲ ಆನೆಗಳನ್ನು ಕರೆದುಕೊಂಡು ಸಕ್ರೆಬೈಲು ಆನೆಬಿಡಾರಕ್ಕೆ ಕರೆದುಕೊಂಡು ಹೋಗಲಾಗಿದೆ.