ತೀರ್ಥಹಳ್ಳಿ ರಾಜಕೀಯದಲ್ಲಿ ಲೆಟರ್ ವಾರ್, ಟಾಪ್ 5 ಗಂಭೀರ ಆರೋಪಗಳು ಇಲ್ಲಿವೆ

 

 

ಸುದ್ದಿ ಕಣಜ.ಕಾಂ | TALUK | POLITICS
ಶಿವಮೊಗ್ಗ: ತೀರ್ಥಹಳ್ಳಿ ರಾಜಕೀಯದಲ್ಲಿ‌ ಮುಸುಕಿನ‌ ಗುದ್ದಾಟ ಮತ್ತೆ ಮುಂದುವರಿದಿದೆ.
ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡ ಅವರ ಬಗ್ಗೆ ಹಲವು ಆರೋಪಗಳನ್ನು ಮಾಡಿದ್ದಾರೆ.

kimmane letter
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ

ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ?

  1. ಕಾಂಗ್ರೆಸ್ಸಿಗೆ ಸೇರಿದ ಮಾರನೇ ದಿನದಿಂದಲೇ
    ಗುಂಪುಗಾರಿಕೆ ನಡೆಸುತ್ತಿದ್ದಾರೆ. ಹೀಗಾಗಿ, ಅವರನ್ನು ಪಕ್ಷದಿಂದ ಹೊರ ಹಾಕುವುದು ಜಿಲ್ಲಾ ರಾಜ್ಯ ಘಟಕಕ್ಕೆ ಅನಿವಾರ್ಯವಾಗಬಹುದು.
  2. ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಘಟಕವನ್ನು ಕಡೆಗಣಿಸಿ ಪಕ್ಷದ ಮುಖಂಡರ ಪೋಟೊ ಬಳಸಿ ಖಾಸಗಿ ಕಾರ್ಯಕ್ರಮ, ಪಾದಯಾತ್ರೆ ಚಳವಳಿ ಹಮ್ಮಿಕೊಂಡು ಭಾಗವಹಿಸಿ ಎಂದು ಕಾಂಗ್ರೆಸಿಗರನ್ನು ಆಹ್ವಾನಿಸಲಾಗುತ್ತಿದೆ. ಅವರ ವರ್ತನೆ ಪಕ್ಷ ವಿರೋಧಿ ಚಟುವಟಿಕೆ ಎಂದು ಭಾವಿಸಬೇಕಾಗಿದೆ.
  3. ಹಣ, ಹೆಂಡ, ಬಿರಿಯಾನಿ ಮೂಲಕ ತೀರ್ಥಹಳ್ಳಿ ಕೇತ್ರದಲ್ಲಿ, ಜನಮನ್ನಣೆ ಪಡೆಯಬಹುದೆಂಬ ಭಾವನೆ ಇದ್ದರೆ ಸಾಧ್ಯವಿಲ್ಲ. ಪಕ್ಷದಲ್ಲಿದ್ದು ಪಕ್ಷದ ಘಟಕಗಳನ್ನು ದೂರ ಮಾಡಿ ಹೋರಾಟದ ಹೆಸರಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
  4. ಶರಾವತಿ ಸಂತ್ರಸ್ತರು, ಬಗರ್‌ ಹುಕುಂ ಸಾಗುವಳಿ ರೈತರಿಗೆ ನ್ಯಾಯ ಕೊಡಿಸಲು ಮಂಜುನಾಥಗೌಡರು ಕಳೆದ 35 ವರ್ಷದಿಂದ ಹೋರಾಟ ಮಾಡಿಲ್ಲ. ಈಗಿನ ಹೋರಾಟಕ್ಕೆ‌ ವಿಧಾನಸಭೆ ಚುನಾವಣೆ ಕಾರಣ
  5. ತಮ್ಮ‌ ಜತೆಗೆ ಬರದಿದ್ದರೆ ಜಿಪಂ, ತಾಪಂ ಚುನಾವಣೆಯಲ್ಲಿ ಟಿಕೆಟ್ ಸಿಗದಂತೆ ಮಾಡುವ ಧಮಕಿ ಹಾಕಲಾಗಿದೆ‌ ಎಂಬ ಆರೋಪ‌ ಆರ್.ಎಂ.ಎಂ. ವಿರುದ್ಧ ಕೇಳಿ ಬಂದಿವೆ. ಇಂತಹ ಸ್ವಭಾವ ಹಲವು ವರ್ಷಗಳಿಂದ ಕಂಡಿದ್ದೇನೆ.

https://www.suddikanaja.com/2021/07/03/war-between-directors-in-sandalwood/

error: Content is protected !!