KODIHALLI SWAMIJI | ಕೊರೊನಾ ಬಗ್ಗೆ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀ, ವಿಶ್ವದಲ್ಲಿ ಸಂಭವಿಸಲಿದೆಯಂತೆ ಇನ್ನೊಂದು ಭಯಾನಕ ಅನಾಹುತ, ಏನದು?

 

 

ಸುದ್ದಿ ಕಣಜ.ಕಾಂ | KARNATAKA | KODIHALLI SWAMIJI
ಶಿವಮೊಗ್ಗ: ತಾಲೂಕಿನ ಕುಂಚೇನಹಳ್ಳಿ ಗ್ರಾಮಕ್ಕೆ ಶನಿವಾರ ಆಗಮಿಸಿದ್ದ ಕೋಡಿಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಅವರು ಕೊರೊನಾ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಜಗತ್ತಿಗೆ ಕಂಟಕವಾಗಿ ಕಾಡುತ್ತಿರುವ ಸಾಂಕ್ರಮಿಕ ಕಾಯಿಲೆ ಕೋವಿಡ್ ಮುಂದಿನ ನಾಲ್ಕೈದು ವರ್ಷಗಳಲ್ಲಿ ಕಡಿಮೆ ಆಗಲಿದೆ. ಸಮಾಜ ಕೊರೊನಾ ಮುಕ್ತಗೊಳ್ಳಲಿದೆ ಎಂದು ಹೇಳಿದರು.

Flodd and corona

ಎರಡು ವರ್ಷದಲ್ಲಿ ಅನಾಹುತಗಳು

`ಈಗಾಗಲೇ ಕೊರೊನಾಗೆ ಲಸಿಕೆ ಬಂದಿದೆ. ಬರುವ ನಾಲ್ಕೈದು ವರ್ಷದಲ್ಲಿ ಕಾಯಿಲೆ ಕಡಿಮೆ ಆಗಲಿದೆ. ಆದರೆ, ಬರುವ ಎರಡು ವರ್ಷಗಳಲ್ಲಿ ಜಗತ್ತಿನಾದ್ಯಂತ ಬಹುದೊಡ್ಡ ಜಲಪ್ರಳಯ, ಭೂಕುಸಿತ, ಗುಡ್ಡ ಕುಸಿತದಂತಹ ಘಟನೆಗಳು ನಡೆಯಲಿದೆ. ಸಾವು ನೋವಿನಿಂದ ಜನ ಕಂಗಾಲಾಗಲಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಸಂಕಷ್ಟಕ್ಕೆ ಒಳಗಾಗಲಿದೆ’ ಎಂದು ಭವಿಷ್ಯ ನುಡಿದರು.

https://www.suddikanaja.com/2021/07/14/swamiji-prophesied-about-state-politics/

ಕೋಡಿಹಳ್ಳಿ ಶ್ರೀಗಳ ನಿಜವಾದ ಈ ಭವಿಷ್ಯವಾಣಿಗಳು

  • ಈ ಹಿಂದೆ ನಾನು ನುಡಿದಿದ್ದ ಭವಿಷ್ಯ ಈಗ ನಿಜವಾಗಿದೆ. ಎರಡು ವರ್ಷಗಳಲ್ಲಿ ವಿಶ್ವದಲ್ಲಿ ಒಂದು ರಾಷ್ಟ್ರ ಇಲ್ಲವಾಗಲಿದೆ ಎಂದಿದ್ದೆ. ಅದು ತಾಲಿಬಾನ್ ರೂಪದಲ್ಲಿ ನಿಜವಾಗಿದೆ.
  • ಕರ್ನಾಟಕದಲ್ಲಿ ಸೂತ್ರಧಾರ ಸರ್ಕಾರ ಅಸ್ತಿತ್ವಕ್ಕೆ ಬರುವುದಾಗಿ ತಿಳಿಸಿದ್ದೆ. ಅದರಂತೆ, ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಿಜೆಪಿ ಸರ್ಕಾರ ನಡೆಸುತ್ತಿದೆ. ಆದರೆ, ಅಧಿಕಾರದಲ್ಲಿರುವ ಬಸವರಾಜ್ ಬೊಮ್ಮಾಯಿ ಅವರು ವಿವೇಕದಿಂದ ಆಡಳಿತ ನಡೆಸಲಿದ್ದಾರೆ.

error: Content is protected !!