ಸುದ್ದಿ ಕಣಜ.ಕಾಂ | KARNATAKA | JOB JUNCTION ಬೆಂಗಳೂರು: ಸ್ವದೇಶಿ ಸಂಸ್ಥೆ ಅದೂ ನಮ್ಮ ಕನ್ನಡದವರದ್ದೇ ಆದ ‘ಕೂ’ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ನೀಡಿದೆ. ಸಾಮಾಜಿಕ ಜಾಲತಾಣ ಕ್ಷೇತ್ರದಲ್ಲಿ ಧೂಳೆಬ್ಬಿಸುತ್ತಿರುವ ಹಾಗೂ ಕನ್ನಡಿಗರ ಮನಸ್ಸಿಗೆ ಹತ್ತಿರವಾಗುತ್ತಿರುವ ಈ ತಾಣ ಒಂದು ಕೋಟಿ ಬಳಕೆದಾರರ ಗುರಿಯನ್ನು ಯಶಸ್ವಿಯಾಗಿ ತಲುಪಿದೆ. ಈ ಹೊಸ್ತಿಲಲ್ಲೇ ಇನ್ನಷ್ಟು ನೇಮಕಾತಿಯ ಗುಟ್ಟನ್ನು ಕೂ ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರು ಬಿಟ್ಟುಕೊಟ್ಟಿದ್ದಾರೆ.
ಅಪ್ರಮೇಯ ರಾಧಾಕೃಷ್ಣ
ಸರ್ಕಾರಿ ಸಂಬಂಧಗಳು, ಮಾರ್ಕೆಟಿಂಗ್, ಬ್ರಾಂಡ್ ಮಾರ್ಕೆಟಿಂಗ್ ವಿಭಾಗದಲ್ಲೂ ನೇಮಕಾತಿ ಮಾಡಲಾಗುವುದು. ಭಾರತೀಯ ತಂತ್ರಜ್ಞಾನವನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವ ಕೌಶಲವಿರುವವರೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ. – ಅಪ್ರಮೇಯ ರಾಧಾಕೃಷ್ಣ, ‘ಕೂ’ ಸಹ ಸಂಸ್ಥಾಪಕ
ರಾಷ್ಟ್ರೀಯ ಸುದ್ದಿ ವಾಹನಿಯೊಂದಕ್ಕೆ ಇದರ ಬಗ್ಗೆ ತಿಳಿಸಿರುವ ಅಪ್ರಮೇಯ ಅವರು, ‘ಪ್ರಸ್ತುತ 200 ಜನ ನೌಕರರಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಕನಿಷ್ಠ 500 ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಎಂಜಿನಿಯರಿಂಗ್, ಉತ್ಪನ್ನ ಹಾಗೂ ಸಮುದಾಯ ನಿರ್ವಹಣೆ ವಿಭಾಗಗಳಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕೊರೊನಾ ಸಂಕಷ್ಟ ಕಾಲದಲ್ಲಿ ಉದ್ಯೋಗ ಇಲ್ಲದೇ ಸಂಕಷ್ಟಕ್ಕೆ ಸಿಲುಕಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದಾರೆ.
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದ ರೈಲ್ವೆ ನಿಲ್ದಾಣ ಸಮೀಪದ ಪಾರ್ಕಿಂಗ್ ಜಾಗದಲ್ಲಿ ಇತ್ತೀಚೆಗೆ ಸಿಕ್ಕಿದ್ದ ಕಬ್ಬಿಣದ ಬಾಕ್ಸ್ ಹಿಂದಿನ ರಹಸ್ಯವನ್ನು ಬೇಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಬಾಕ್ಸ್ ನಲ್ಲಿದ್ದ ಉಪ್ಪಿನ ರಹಸ್ಯವೇನು? […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಸಿಬ್ಬಂದಿಯನ್ನು ಕೂಡ ಇತರೆ ಇಲಾಖೆಗಳ ಸಿಬ್ಬಂದಿಯಂತೆ ಕೊರೊನಾ ವಾರಿಯರ್ಸ್ ಗಳಾಗಿ ಪರಿಗಣಿಸಿ, ಅವರಿಗೆ ಎಲ್ಲ ರೀತಿಯ ನೆರವು ಸಹಕಾರ ಒದಗಿಸಲಾಗುವುದು […]
ಸುದ್ದಿ ಕಣಜ.ಕಾಂ | DISTRICT | GANESH FESTIVAL ಶಿವಮೊಗ್ಗ: ಸುದೀರ್ಘ ಇತಿಹಾಸ ಹೊಂದಿರುವ ಹಾಗೂ ರಾಜ್ಯದ ಗಮನವನ್ನೇ ತನ್ನತ್ತ ಸೆಳೆಯುವ ಹಿಂದೂ ಸಂಘಟನೆಗಳ ಮಹಾ ಮಂಡಳ (ಹಿಂದೂ ಮಹಾಸಭಾ) ಗಣೇಶನ ರಾಜ […]