ಸುದ್ದಿ ಕಣಜ.ಕಾಂ | TALUK | CRIME
ಭದ್ರಾವತಿ: ಕೆ.ಎಸ್.ಆರ್.ಟಿ.ಸಿ ನೌಕರನೊಬ್ಬ ಮನೆಯಲ್ಲಿನ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.
https://www.suddikanaja.com/2021/05/18/gangadhar-adderi-died-in-shivamogga/
ಇಲ್ಲಿನ ಹೊಸ ಸಿದ್ದಾಪುರದ ನಾಲ್ಕನೇ ತಿರುವಿನಲ್ಲಿ ವಾಸವಾಗಿರುವ ಗಂಗಾಧರ್ (46) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
READ | ಸಾಲ ಬಾಧೆ ತಾಳದೇ ಮಗಳಿಗೆ ನೇಣು ಹಾಕಿ, ತಾನೂ ನೇಣಿಗೆ ಶರಣಾದ ಮಹಿಳೆ
ಮನೆಯಲ್ಲಿ ಯಾರೂ ಇಲ್ಲದಾಗ ಆತ್ಮಹತ್ಯೆ
ಸೋಮವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಗಂಗಾಧರ್ ಅವರು ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳವಾರ ಬೆಳಗ್ಗೆ ಆತ್ಮಹತ್ಯೆಯ ವಿಚಾರ ಬೆಳಕಿಗೆ ಬಂದಿದೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಜನ ಮನೆಯ ಬಳಿ ನೆರೆದಿದ್ದರು.
ಗಂಗಾಧರ್ ಅವರು ಆರಂಭದಲ್ಲಿ ಬಿಎಂಟಿಸಿಯಲ್ಲಿ ಕಾರ್ಯಾರಂಭಿಸಿದ್ದರು. ಅದಾದ ಬಳಿಕ, ಧರ್ಮಸ್ಥಳದಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಈಗ ಶಿವಮೊಗ್ಗ-ಬೆಂಗಳೂರು ಬಸ್ ಮಾರ್ಗದಲ್ಲಿ ಚಾಲಕರಾಗಿದ್ದರು ಎಂದು ತಿಳಿದುಬಂದಿದೆ.
https://www.suddikanaja.com/2021/07/29/man-suicide-in-home/