ಬೆಂಗಳೂರಿಗೆ ಹೋದ ವ್ಯಕ್ತಿ ನಾಪತ್ತೆ

 

 

ಸುದ್ದಿ‌ ಕಣಜ.ಕಾಂ | CITY | CRIME
ಶಿವಮೊಗ್ಗ: ನಗರದ ಹೊಸಮನೆಯ ವ್ಯಕ್ತಿಯೊಬ್ಬರು ಬೆಂಗಳೂರಿಗೆ ಹೋಗಿದ್ದು, ನಾಪತ್ತೆಯಾಗಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೈಬ್ರೆರಿಯನ್ ಎಸ್. ಅರುಳ್‍ಕುಮಾರ್ (51) ಎಂಬುವವರೇ ನಾಪತ್ತೆಯಾಗಿದ್ದಾರೆ. ಆಗಸ್ಟ್ 23ರಂದು ಬೆಂಗಳೂರಿಗೆ ಮನೆಯಿಂದ ಹೋದವರು ಇದುವರೆಗೆ ಮರಳಿಲ್ಲ.

ಗುರುತು ಪತ್ತೆಯಾದರೆ ಪೊಲೀಸರಿಗೆ ತಿಳಿಸಿ

5.3 ಅಡಿ ಎತ್ತರ, ಎಣ್ಣೆ ಕೆಂಪು ಮೈಬಣ್ಣ, ದಪ್ಪನೆಯ ಮೈಕಟ್ಟು, ಕನ್ನಡ, ತಮಿಳು, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಈ ವ್ಯಕ್ತಿಯು ಕಾಣೆಯಾಗುವ ದಿನದಂದು ಗೋದಿ ಬಣ್ಣದ ಮೆಲೆ ಕಪ್ಪು ಚೆಕ್ಸ್ ಶರ್ಟ್ ಧರಿಸಿರುತ್ತಾರೆ. ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ದೊಡ್ಡಪೇಟೆ ಪೊಲೀಸ್ ಠಾಣೆಗೆ ಅಥವಾ ಕಂಟ್ರೋಲ್ ರೂಂ ನಂ.100 ಗಳಿಗೆ ತಿಳಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

error: Content is protected !!