ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 15 ಜನರಿಗೆ ಕೊರೊನಾ ಸೋಂಕು ತಗಲಿದೆ. 17 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಂದೂ ಯಾವುದೇ ಸಾವು ಸಂಭವಿಸಿಲ್ಲ. ಇಲ್ಲಿಯವರೆಗೆ 348 ಜನರನ್ನು ಕೊರೊನಾ ಬಲಿ ಪಡೆದಿದೆ.
ಇದು ವಿಶ್ವದಲ್ಲೇ ವಿಶಿಷ್ಟ ಹಾರ್ಟ್ ಸರ್ಜರಿ, ಎಲ್ಲಿ ನಡೀತು ಗೊತ್ತು?
ಭಾನುವಾರವಾದ್ದರಿಂದ ಕೇವಲ 208 ಗಂಟಲು ದ್ರವದ ಮಾದರಿಗಳನ್ನು ಮಾತ್ರ ಸಂಗ್ರಹಿಸಲಾಗಿದೆ. 1120 ನೆಗೆಟಿವ್ ಬಂದಿವೆ.
ತಾಲೂಕುವಾರು ವರದಿ: ಶಿವಮೊಗ್ಗದಲ್ಲಿ 9, ಭದ್ರಾವತಿ 2, ಶಿಕಾರಿಪುರ 0, ತೀರ್ಥಹಳ್ಳಿ 0, ಸೊರಬ 1, ಸಾಗರ 3, ಹೊಸನಗರ 0, ಬೇರೆಯ ಜಿಲ್ಲೆ 0 ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಪ್ರಸಕ್ತ 116 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ 51, ಖಾಸಗಿ ಆಸ್ಪತ್ರೆಯಲ್ಲಿ 51, ಮನೆ ಆರೈಕೆಯಲ್ಲಿ 56 ಜನರಿದ್ದಾರೆ.