ಸುದ್ದಿ ಕಣಜ.ಕಾಂ
ಶಿವಮೊಗ್ಗ: ಎರಡನೇ ಹಂತದ ಗ್ರಾಮ ಪಂಚಾಯಿತಿ ಮತದಾನ ಭಾನುವಾರ ಪೂರ್ಣಗೊಂಡಿದ್ದು, ಮತಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ.
ಗ್ರಾಪಂ ಮತದಾನ ಮಾಡಿ ಇಹಲೋಕ ತ್ಯಜಿಸಿದ ವೃದ್ಧೆ
ಶಿವಮೊಗ್ಗ ಜಿಲ್ಲೆಯ ಎರಡನೇ ಹಂತದಲ್ಲಿ ಸಾಗರ, ಸೊರಬ, ಶಿಕಾರಿಪುರ ಮತ್ತು ಹೊಸನಗರ ಸೇರಿ ಒಟ್ಟು ಶೇಕಡ 80.91ರಷ್ಟು ಮತದಾನವಾಗಿದೆ.
ತಾಲೂಕುವಾರು ಮತದಾನ: ಸಾಗರ ತಾಲೂಕಿನಲ್ಲಿ ಶೇ.79.84, ಸೊರಬದಲ್ಲಿ ಶೇ.86.22, ಶಿಕಾರಿಪುರದಲ್ಲಿ ಶೇ.86.31 ಮತ್ತು ಹೊಸನಗರದಲ್ಲಿ ಶೇ.69.35ರಷ್ಟು ಮತದಾನವಾಗಿದೆ.