ಸಾರ್ವಜನಿಕ ಸ್ಥಳದಲ್ಲಿ‌ ಪುಂಡಾಟ, ಎಸ್ಕೇಪ್‌ಆದ ಯುವಕರ ಗುಂಪಿನ ವಿರುದ್ಧ ಬಿತ್ತು ಕೇಸ್

 

 

ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ತಾಲೂಕಿನ ಸಾರ್ವಜನಿಕ ಸ್ಥಳದಲ್ಲಿ ಯುವಕರ ಗುಂಪೊಂದು ಪುಂಡಾಟ ಮಾಡಿದ್ದು, ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತ‌ನಿಖೆ ನಡೆಸುತಿದ್ದಾರೆ.
ಕೌಶಿಕ್ (22), ವಿನಾಯಕ (25), ಸಂದೀಪ (26), ಅರುಣ್ ಕುಮಾರ್ (29), ಅಭಿಷೇಕ್ (28), ತಿಲಕ್ (30) ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

READ | ಬಂಗಾರ ಪ್ರಿಯರಿಗೆ ಶಾಕಿಂಗ್ ಸುದ್ದಿ, ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ದರವೆಷ್ಟು, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಖಾಕಿ‌ ಕಂಡು ಯುವಕರ ಗುಂಪು ಎಸ್ಕೇಪ್
ತಾಳಗುಪ್ಪ‌ ಬಸ್ ನಿಲ್ದಾಣ ಬಳಿ ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಜಗಳವಾಗಿದೆ. ಪರಸ್ಪರ ಅವಾಚ್ಯವಾಗಿ‌ ನಿಂದಿಸಿಕೊಂಡಿದ್ದಲ್ಲದೇ ಕೈಕೈ ಮಿಲಾಯಿಸಿದ್ದಾರೆ. ಇದರಿಂದಾಗಿ‌ ಕೆಲಹೊತ್ತು ಬಸ್ ನಿಲ್ದಾಣ ಬಳಿ‌ ಉದ್ವಿಗ್ನ ಸ್ಥಿತಿ‌ ಏರ್ಪಟ್ಟಿತ್ತು. ಪೊಲೀಸರಿಗೆ ಈ ಬಗ್ಗೆ ಮಾಹಿತಿ ದೊರೆತಿದ್ದೇ ಸ್ಥಳಕ್ಕೆ ಧಾವಿಸಿದ್ದಾರೆ. ಆಗ ಗುಂಪು ಚದುರಿದ್ದು, ಎಲ್ಲರೂ ಓಡಿ ಹೋಗಿದ್ದಾರೆ.

error: Content is protected !!