ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶರಾವತಿ ಮುಳುಗಡೆ ಸಂತ್ರಸ್ತರಿಗಾಗಿ ಶಿವಮೊಗ್ಗದಲ್ಲಿ ಕಾಂಗ್ರೆಸ್ ನಡೆಸಿದ ಮಲೆನಾಡು ಜನಾಕ್ರೋಶ ಸಮಾವೇಶದಲ್ಲಿ ಮಾಡಲಾದ ಆರೋಪಗಳಿಗೆ ಸಂಸದ ಬಿ.ವೈ.ರಾಘವೇಂದ್ರ (BY Raghavendra) ಉತ್ತರಿಸಿದರು.
ಮಲೆನಾಡು ಜನಾಕ್ರೋಶ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರು ದಂ ಇದ್ದರೆ, ತಾಕತ್ತು ಇದ್ದರೆ ಎಂಬಿತ್ಯಾದಿ ಪದಪ್ರಯೋಗ ಮಾಡಿದ್ದಾರೆ. ಇದು ಸರಿಯಲ್ಲ. ಅದಕ್ಕಾಗಿ, ನಾವೂ ಅಂತಹ ಪದಗಳನ್ನು ಬಳಸುವುದಿಲ್ಲ. ದೇಶ ಮತ್ತು ರಾಜ್ಯದಲ್ಲಿ ಪ್ರಗತಿಯೇ ಎಲ್ಲದಕ್ಕೂ ಉತ್ತರವಾಗಿದೆ.
| ಬಿ.ವೈ.ರಾಘವೇಂದ್ರ, ಸಂಸದ
ಬಿಜೆಪಿ ಕಚೇರಿಯಲ್ಲಿ ಬುಧವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಜತೆಗೆ, ಗಂಭೀರ ಆರೋಪಗಳನ್ನು ಸಹ ಮಾಡಿದದರು.
ಕಾಂಗ್ರೆಸ್‍ನಿಂದ ರಾಜಕೀಯ ದುರುದ್ದೇಶಕ್ಕಾಗಿ ಶರಾವತಿ ಸಂತ್ರಸ್ತರನ್ನು ದಾರಿತಪ್ಪಿಸಲಾಗುತ್ತಿದೆ.
ಕಾಂಗ್ರೆಸ್’ನಿಂದ ಆಯೋಜಿಸಿದ್ದ ಪಾದಯಾತ್ರೆ ಮತ್ತು ಸಮಾವೇಶದಲ್ಲಿ ರೈತರಿಗಿಂತ ಕಾಂಗ್ರೆಸ್ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎಂದು ಆರೋಪಿಸಿದರು.
VIDEO REPORT
READ | ಅಡಿಕೆ ವರ್ತಕರೊಂದಿಗೆ ಪೊಲೀಸರ ಮಹತ್ವದ ಸಭೆ, ಪ್ರಮುಖ 6 ಸೂಚನೆಗಳು
ಸಂಸದ ಬಿ.ವೈ.ರಾಘವೇಂದ್ರ ಕೇಳಿದ ಪ್ರಶ್ನೆಗಳಿವು
- ಶರಾವತಿ ಪುನರ್ವತಿ ಪ್ರಕ್ರಿಯೆ 1958ರಲ್ಲಿ ನಡೆದಿದೆ. 27 ಸರ್ಕಾರಿ ಆದೇಶಗಳು ಅವರಿಗೆ ಪುನರ್ವಸತಿ ಬಿಡುಗಡೆಯಾಗಿವೆ. 64 ವರ್ಷವಾದರೂ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಕಾಂಗ್ರೆಸ್ ನಾಯಕರು ಏಕೆ ಮಾಡಿಲ್ಲ? ಅದು ಸರಿಯಾಗಿ ಮಾಡಿದ್ದಿದ್ದರೆ ಈಗ ಪಾದಯಾತ್ರೆಯ ಅಗತ್ಯವೇ ಇರಲಿಲ್ಲ.
- 1980ರಲ್ಲಿ ಅರಣ್ಯ ಸಂರಕ್ಷಣ ಕಾಯ್ದೆ ಜಾರಿಗೆ ಮುನ್ನ ಸಮಸ್ಯೆ ಬಗೆಹರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇತ್ತು. ಏಕೆ ಆ ಸಂದರ್ಭದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ? 1980ರ ನಂತರ ನಿಮ್ಮದೇ ಸರ್ಕಾರವೇ ಇತ್ತು. ಜಿಲ್ಲೆಯ ಅನೇಕ ಹಿರಿಯರು ಅರಣ್ಯ ಸಚಿವ, ಕಂದಾಯ ಮತ್ತು ಕಾನೂನು ಸಚಿವರಿದ್ದರೂ ಸಂತ್ರಸ್ತರ ತೊಂದರೆಗಳಿಗೇಕೆ ತಾರ್ಕಿಕ ಅಂತ್ಯ ಹಾಡಲಿಲ್ಲ?
- 1980ರಿಂದ 2017ರವರೆಗೆ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗೇಕೆ ಸಂತ್ರಸ್ತರ ಸಮಸ್ಯೆಗೆ ಮುಕ್ತಿ ಹಾಡುವ ಕೆಲಸ ಮಾಡಿಲ್ಲ?
- ಶರಾವತಿ ಸಂತ್ರಸ್ತಗರು, ಬಗರ್ ಹುಕು, ಅರಣ್ಯ ಹಕ್ಕು ಕಾಯ್ದೆ ಈ ವಿಚಾರಗಳನ್ನು ರಾಜಕೀಯಕ್ಕಾಗಿ ಇನ್ನೆಷ್ಟು ವರ್ಷ ಬಳಕೆ ಮಾಡುತ್ತೀರಾ? ನೀವು ಮಾಡಿದ ಇನ್ನೊಬ್ಬರ ಮೇಲೆ ಹಾಕುವುದೇಕೆ?
ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
https://suddikanaja.com/2022/11/30/mobile-theft-case-accused-arrested-by-police-within-24-hours/