BREAKING NEWS | ತುಂಗಾ ಚಾನಲ್ ಗೆ ಬಿದ್ದು ಸಾವಿನ ದವಡೆಯಲ್ಲಿದ್ದ ಹಸುವನ್ನು ರಕ್ಷಿಸಿದ ಮುಸ್ಲಿಂ ಯುವಕರು, ರಾತ್ರೋರಾತ್ರಿ ಕಾರ್ಯಾಚರಣೆ

 

 

ಸುದ್ದಿ ಕಣಜ.ಕಾಂ‌ | CITY | CRIME
ಶಿವಮೊಗ್ಗ: ರಭಸವಾಗಿ ಹರಿಯುತ್ತಿರುವ ತುಂಗಾ ಚಾನಲ್ ಗೆ ಬಿದ್ದಿದ್ದ ಮಣಕ (ಹಸು)ವನ್ನು ಬುಧವಾರ ರಾತ್ರಿ ರಕ್ಷಿಸಲಾಗಿದೆ.
ಗೆಜ್ಜೆನಹಳ್ಳಿ ಬಳಿಯ ತುಂಗಾ ಚಾನಲ್‌ ಗೆ ಆಯ ತಪ್ಪಿ ಬಿದ್ದಿದ್ದ ಮಣಕವನ್ನು ಕಂಡ ತಕ್ಷಣ ಇಬ್ಬರು ಮುಸ್ಲಿಂ ಯುವಕರು ರಕ್ಷಣೆಗೆ ಧಾವಿಸಿದ್ದಾರೆ.

ಶಿವಮೊಗ್ಗದ ಗೆಜ್ಜೆನಹಳ್ಳಿ ತುಂಗಾ ಚಾನಲ್‍ಗೆ ಬಿದ್ದ ಮಣಕ ರಕ್ಷಣೆ ಕಾರ್ಯದ ವಿಡಿಯೋಗಾಗಿ ವಿಡಿಯೋ ಲಿಂಕ್ ಮೇಲೆ ಕ್ಲಿಕ್ ಮಾಡಿ (VIDEO REPORT)

READ | ಶಾರ್ಟ್ ಸರ್ಕ್ಯೂಟ್, ಹೊತ್ತಿ ಉರಿದ ಮನೆಯ ಸಾಮಗ್ರಿ, ಲಕ್ಷಾಂತರ ನಷ್ಟ

ಯುವಕರ ಕಾರ್ಯಕ್ಕೆ ಶ್ಲಾಘನೆ
ಮಣಕಕ್ಕೆ ಹಗ್ಗ ಕಟ್ಟಿ ಹಿಡಿದು‌ಕೊಂಡಿದ್ದು, ನಂತರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಹಗ್ಗದ ಸಹಾಯದಿಂದ ಅದನ್ನು‌ ಮೇಲಕ್ಕೆತ್ತಿದ್ದಾರೆ. ಪರಿಣಾಮ ಮೂಕ‌ಪ್ರಾಣಿ ಬದುಕುಳಿದಿದೆ.
ಅಗ್ನಿಶಾಮಕ ಅಧಿಕಾರಿ ಅಶೋಕ್ ಕುಮಾರ್, ಠಾಣಾಧಿಕಾರಿ ಪ್ರವೀಣ್ ನೇತೃತ್ವದಲ್ಲಿ ಸಿಬ್ಬಂದಿಯನ್ನೊಳಗೊಂಡ ತಂಡ ರಕ್ಷಿಣಾ ಕಾರ್ಯ ಮಾಡಿದೆ. ಸ್ಥಳೀಯ ಯುವಕರಾದ ಇಮ್ರಾನ್, ಅಬ್ಬರ್ ಕೈಜೋಡಿಸಿದ್ದಾರೆ.

error: Content is protected !!