ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಶ್ರೀಗಂಧದ ಮರ ಸೀಜ್

 

 

ಸುದ್ದಿ ಕಣಜ.ಕಾಂ | TALUK | CRIME
ಶಿರಾಳಕೊಪ್ಪ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಶ್ರೀಗಂಧ ಮರದ ತುಂಡುಗಳನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

READ | ಅಡಿಕೆ ಗೊನೆಗಳನ್ನು ಕಿತ್ತು ಪರಾರಿಯಾದ ಖದೀಮರು!

ಶುಕ್ರವಾರ ಬೆಳಗ್ಗೆ ಯಾರೋ ಇಬ್ಬರು ಅಕ್ರಮವಾಗಿ ಲೈಸೆನ್ಸ್ ಇಲ್ಲದೆ ಶ್ರೀಗಂಧ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದಾರೆ.
ಶ್ರೀಗಂಧದ ತುಂಡುಗಳು ಸಿಕ್ಕಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲಾಗಿದೆ. ಅವರು ಬಂದ ನಂತರ ಶ್ರೀಗಂಧ ಎಂದು ದೃಢ ಪಡಿಸಿಕೊಂಡು ವಿಂಗಡಿಸಿ ಮತ್ತು ತೂಕ ಮಾಡಿದ್ದು 69 ಕೆಜಿ 30 ಗ್ರಾಂ ಇರುವುದಾಗಿ ಗೊತ್ತಾಗಿದೆ.

ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಅವರ ವಿರುದ್ಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಸ್ವದೂರು ಪ್ರಕರಣ ದಾಖಲಾಗಿದೆ.

error: Content is protected !!