ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಚುರುಕು, ಹೊಸನಗರದಲ್ಲಿ ವಾಡಿಕೆ ಮೀರಿದ ಮಳೆ, ಯಾವ ತಾಲೂಕಿನಲ್ಲಿ ಎಷ್ಟು ವರ್ಷಧಾರೆ?

 

 

ಸುದ್ದಿ ಕಣಜ.ಕಾಂ | DISTRICT | RAIN FALL
ಶಿವಮೊಗ್ಗ: ಇಡೀ ತಿಂಗಳು ಜಿಲ್ಲೆಯಲ್ಲಿ ಮೌನವಾಗಿದ್ದ ಮಳೆ ಕಳೆದ ಎರಡು ದಿನಗಳಿಂದ ರಚ್ಚೆ ಹಿಡಿದಿದೆ. ಜಿಲ್ಲೆಯ ಮಲೆನಾಡಿನ ತಾಲೂಕುಗಳಲ್ಲಿ ವರ್ಷಧಾರೆ ಮತ್ತೆ ಚುರುಕುಗೊಂಡಿದೆ. ಭಾನುವಾರ ಉತ್ತಮ ಮಳೆ ಸುರಿದಿದೆ.

https://www.suddikanaja.com/2021/06/18/highest-rainfall-in-hosanagara/

ಜಿಲ್ಲೆಯ ಹೊಸನಗರ ಹೊರತುಪಡಿಸಿ ಎಲ್ಲ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ. ಹೊಸನಗರ ತಾಲೂಕಿನಲ್ಲಿ 219.60 ಎಂಎಂ ವಾಡಿಕೆ ಮಳೆಯಿದ್ದರೆ, ಈ ಸಲ 13 ದಿನಗಳಲ್ಲಿ 1,150.20 ಎಂಎಂ ಮಳೆ ಸುರಿದಿದೆ. ಇನ್ನುಳಿದ ಎಲ್ಲ ತಾಲೂಕುಗಳಲ್ಲಿ ಮಳೆ ಕೊರತೆ ಇದೆ. ಆದರೆ, ಸರಾಸರಿ ಮಳೆಯಲ್ಲಿ ವಾಡಿಕೆ (164.16 ಎಂಎಂ)ಗಿಂತ ವಾಸ್ತವದಲ್ಲಿ 246.50 ಎಂಎಂ ಮಳೆಯಾಗಿದೆ.
ಜಲಾಶಯಗಳಲ್ಲೂ ನೀರಿನ ಪ್ರಮಾಣ ಇಳಿಕೆ
ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ 82.80 ಎಂಎಂ ಮಳೆಯಾಗಿದೆ. ಆದರೆ, ತುಂಬುವ ಹಂತಕ್ಕೆ ತಲುಪಿದ್ದ ಜಲಾಶಯದಲ್ಲಿ ಮತ್ತೆ ನೀರಿನ ಪ್ರಮಾಣ ಇಳಿಕೆಯಾಗಿದೆ. ಪ್ರಸ್ತುತ 1815.25 ಅಡಿ ನೀಡಿದ್ದು, 33,258 ಕ್ಯೂಸೆಕ್ಸ್ ಒಳಹರಿವು ಇದೆ. ಭದ್ರಾದಲ್ಲಿ 185.70 ಅಡಿ ನೀರಿದ್ದು, 7,781 ಕ್ಯೂಸೆಕ್ಸ್ ಒಳಹರಿವಿದೆ. ತುಂಗಾ (ಗಾಜನೂರು) ಜಲಾಶಯದಲ್ಲಿ 588.24 ಅಡಿ ನೀರಿದ್ದು, ನದಿಯಿಂದ ಡ್ಯಾಂಗೆ ಹರಿದು ಬರುತ್ತಿರುವ ನೀರನ್ನು ಹೊರಬಿಡಲಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗದಲ್ಲಿ ಸುರಿದ ಮಳೆ (ಎಂಎಂಗಳಲ್ಲಿ)
ತಾಲೂಕು ಒಟ್ಟು  ವಾಡಿಕೆ ಮಳೆ  2020ರ ಮಳೆ
ಶಿವಮೊಗ್ಗ 39.6 100.6 190
ಭದ್ರಾವತಿ 26.6 101.9 153.4
ತೀರ್ಥಹಳ್ಳಿ 215.2 266.9 247.8
ಸಾಗರ 164.4 234.4 159.42
ಶಿಕಾರಿಪುರ 36.4 96.5 124.2
ಸೊರಬ 93.1 129.4 134.5
ಹೊಸನಗರ 1150.2 219.6 497.8
ಸರಾಸರಿ ಮಳೆ 246.5 164.16 215.3

https://www.suddikanaja.com/2021/06/13/monsoon-rain-started-in-shivamogga/

 

error: Content is protected !!