ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಲೋಕಸಭೆ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಅಫಿಡೇವಿಟ್ ನಲ್ಲಿ 73.71 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಈ ಪೈಕಿ ರಾಘವೇಂದ್ರ 55.85 ಕೋಟಿ ರೂ., ಪತ್ನಿ ತೇಜಸ್ವಿನಿ 17.86 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಅಫಿಡೆವಿಟ್ ನಲ್ಲಿ ಉಲ್ಲೇಖಿಸಿರುವಂತೆ ರಾಘವೇಂದ್ರ ವಿರುದ್ಧ ನಾಲ್ಕು ಪ್ರಕರಣಗಳಿವೆ.
READ | ಯಡಿಯೂರಪ್ಪ ವಿರುದ್ಧವೇ ತೊಡೆತಟ್ಟಿರುವ ಈಶ್ವರಪ್ಪರ ಆಸ್ತಿ ಎಷ್ಟಿದೆ? ಈಶ್ವರಪ್ಪ ಮೇಲಿದೆ ಭಾರಿ ಸಾಲ!
ಪತ್ನಿ, ಪುತ್ರ, ಸಹೋದರನಿಗೂ ಸಾಲ!
ಬಿ.ವೈ.ರಾಘವೇಂದ್ರ ವಿವಿಧ ಸಂಘ, ಸಂಸ್ಥೆಗಳಿಗೆ 20.39 ಕೋಟಿ ರೂ. ಸಾಲ ನೀಡಿದ್ದಾರೆ. ಪತ್ನಿ ತೇಜಸ್ವಿನಿಗೆ 5.49 ಕೋಟಿ, ಸಹೋದರ ಬಿ.ವೈ.ವಿಜಯೇಂದ್ರಗೆ 85 ಲಕ್ಷ, ಪುತ್ರರಾದ ಭಗತ್ ಗೆ 65 ಲಕ್ಷ, ಸುಭಾಷ್ ಗೆ 85 ಲಕ್ಷ ರೂ. ಸಾಲ ನೀಡಿದ್ದಾರೆ. ಪತ್ನಿ ತೇಜಸ್ವಿನಿ ಭಗತ್ ಹೋಮ್ಸ್ ಪ್ರೈ.ಲಿ.ಗೆ 2.50 ಲಕ್ಷ ರೂ. ನೀಡಿದ್ದಾರೆ. ಸಾಲ ನೀಡುವುದಷ್ಟೇ ಅಲ್ಲ. ರಾಘವೇಂದ್ರ ಮತ್ತು ತೇಜಸ್ವಿನಿಯ ಮೇಲೆ ಸಾಲದ ಹೊರೆಯೂ ಇದೆ. ರಾಘವೇಂದ್ರಗೆ 69.39 ಲಕ್ಷ ರೂ. ಹಾಗೂ ತೇಜಸ್ವಿನಿಗೆ 12.91 ಕೋಟಿ ರೂ. ಸಾಲವಿದೆ.
ಪತಿ, ಪತ್ನಿ ಬಳಿ ಎಷ್ಟು ಆಸ್ತಿ ಇದೆ?
ರಾಘವೇಂದ್ರ ಬಳಿ 33,291 ಲಕ್ಷ ರೂ., ಪತ್ನಿ ತೇಜಸ್ವಿನಿ ಬಳಿ 9,39,109 ರೂ. ಇದೆ. ರಾಘವೇಂದ್ರ ವಿವಿಧ ಬ್ಯಾಂಕ್ ಗಳಲ್ಲಿ 13 ಖಾತೆಗಳನ್ನು ಹೊಂದಿದ್ದಾರೆ. ಅದರಲ್ಲಿ 98,01,123 ರೂ. ಹಣವಿದೆ. 15 ಕಂಪನಿಗಳಲ್ಲಿ 7.68 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಪತ್ನಿ 8 ಖಾತೆ ಹೊಂದಿದ್ದು, 25,65,557 ರೂ. ಹಣ ಇದೆ. 6 ಕಂಪನಿಗಳಲ್ಲಿ 1.22 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಮ್ಯೂಚ್ಯುವಲ್ ಫಂಡ್, ಬಾಂಡ್ ಗಳಲ್ಲಿ ರಾಘವೇಂದ್ರ 2.22 ಕೋಟಿ ರೂ. ಹಾಗೂ ತೇಜಸ್ವಿನಿ 30 ಸಾವಿರ ರೂ. ಹೂಡಿಕೆ ಮಾಡಿದ್ದಾರೆ.
ಯಾರ ಬಳಿ ಎಷ್ಟು ಚಿನ್ನ, ಬೆಳ್ಳಿ, ವಜ್ರವಿದೆ?
ರಾಘವೇಂದ್ರ ಬಳಿ 1022.50 ಗ್ರಾಂ ಚಿನ್ನವಿದೆ. 114.26 ಕ್ಯಾರಟ್ ವಜ್ರ, 8.6 ಕೆಜಿ ಬೆಳ್ಳಿ, 42 ಕ್ಯಾರಟ್ ಬೆಲೆ ಬಾಳುವ 98,83,650 ರೂ. ಮೌಲ್ಯದ ಆಭರಣಗಳಿವೆ.
ಪತ್ನಿ ತೇಜಸ್ವಿನಿ ಬಳಿ 1395.92 ಗ್ರಾಂ. ಚಿನ್ನ, 96.022 ಕ್ಯಾರಟ್ ವಜ್ರ, 5.1 ಕೆಜಿ ಬೆಳ್ಳಿ ಸೇರಿ 1,13,73,125 ರೂ. ಮೌಲ್ಯದ ಆಭರಣಗಳಿವೆ.
ಎಷ್ಟು ಕಾರುಗಳಿವೆ?
ರಾಘವೇಂದ್ರ ಬಳಿ 1 ಲಕ್ಷ ರೂ. ಮೌಲ್ಯದ ಅಂಬಾಸಿಡರ್ ಕಾರು, 2,45,700 ರೂ. ಮೌಲ್ಯದ ಟ್ರಾಕ್ಟರ್ ಫಗ್ರ್ಯೂಸನ್, 41,32,000 ರೂ. ಮೌಲ್ಯದ ಟೊಯಾಟೊ ಫಾಚ್ರ್ಯುನ್ ಎಲ್ಲ ಸೇರಿ ಒಟ್ಟು 44,77,700 ರೂ. ಮೌಲ್ಯದ ವಾಹನಗಳಿವೆ.
ದಂಪತಿ ಬಳಿ ಇದೆ ಕೋಟ್ಯಂತರ ಮೌಲ್ಯದ ಜಮೀನು
ರಾಘವೇಂದ್ರ ಬಳಿ 1.32 ಕೋಟಿ ರೂ. ಮೌಲ್ಯದ 11.33 ಎಕರೆ ಜಮೀನಿದೆ. 18 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಇದೆ. ಪತ್ನಿ ಬಳಿ 8.07 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಇದೆ. ರಾಘವೇಂದ್ರ ಹೆಸರಲ್ಲಿ 1.24 ಕೋಟಿ ರೂ. ಮೌಲ್ಯದ ಕಟ್ಟಡಗಳಿವೆ. ವಿನೋಬನಗರ, ಶಿಕಾರಿಪುರದಲ್ಲಿ ವಾಸದ ಮನೆಗಳಿವೆ. ಇವುಗಳ ಮೌಲ್ಯ 4.18 ಕೋಟಿ ಇದೆ. ತೇಜಸ್ವಿನಿ ಬಳಿ 6.82 ಕೋಟಿ ಮೌಲ್ಯದ ಮನೆಗಳಿವೆ.