ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಗುರುವಾರ ಸುರಿದಿರುವ ಮಳೆ ಜಿಲ್ಲೆಯ ಹಲವೆಡೆ ಅನಾಹುತಗಳನ್ನು ಸೃಷ್ಟಿಸಿದೆ. ತೀರ್ಥಹಳ್ಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.
ಮೋಡ ಕವಿದ ವಾತಾವರಣ ತುಂತುರು ಮಳೆ
SHIMOGA: ಶಿವಮೊಗ್ಗ ತಾಲೂಕಿನಲ್ಲಿ ಮಧ್ಯಾಹ್ನದ ನಂತರ ಗುಡುಗು, ಮಿಂಚು ಸಹಿತ ತುಂತುರು ಮಳೆಯಾಗಿದೆ. ನಗರದಲ್ಲೂ ನೆಲ ಹಸಿಯಾಗುವಷ್ಟು ಮಳೆ ಸುರಿದಿದೆ.
ತಾಲೂಕಿನ ಕುಂಸಿ ಸಮೀಪದ ರೇಚಿಕೊಪ್ಪ ಗ್ರಾಮದಲ್ಲಿ ರಸ್ತೆಯಲ್ಲಿ ಮರ ಉರುಳಿತ್ತು. ವಿದ್ಯತ್ ತಂತಿ ತುಂಡಾಗಿ ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ತಾಲೂಕು ಸುತ್ತಮುತ್ತ ಉತ್ತಮ ವರ್ಷಧಾರೆ ಆಗಿದೆ.
ತೀರ್ಥಹಳ್ಳಿಯಲ್ಲಿ ಒಂದು ಸಾವು
THIRTHAHALLI: ತಾಲೂಕಿನ ನಾನಾ ಕಡೆ ಮಳೆಯಾಗಿದೆ. ಕೋಣಂದೂರು ಸಮೀಪದ ದೇಮ್ಲಾಪುರ ಗ್ರಾಮದಲ್ಲಿ ಬಿರುಸು ಗಾಳಿಗೆ ಮರ ನೆಲಕ್ಕುರುಳಿದೆ. ಆಗ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ವ್ಯಕ್ತಿಯ ಮೇಲೆ ಮರ ಬಿದ್ದು ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಕೋಣಂದೂರಿನ ಸಂಪಗಾರಿಗೆ ತೆರಳುತ್ತಿದ್ದ ಜಯಂತ್ ಭಡ್ (64) ಎಂಬುವವರು ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗುಂಬೆಯ ಮೂರನೇ ತಿರುವಿನಲ್ಲಿ ಮರ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಮರವನ್ನು ರಸ್ತೆಯಿಂದ ತೆರವುಗೊಳಿಸಿದರು.
ಮರ ಬಿದ್ದು ಸಂಚಾರ ವಿಳಂಬ
ANANDAPURA: ಸಾಗರ ತಾಲೂಕು ಆನಂದಪುರದಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ಮುಂಬಾರು ಸಮೀಪ ಮರವೊಂದು ರಸ್ತೆ ಮೇಲೆ ಉರುಳಿದ್ದು, ಒಂದು ಗಂಟೆ ಸಂಚಾರ ವ್ಯತ್ಯಯ ಉಂಟಾಯಿತು.
ರಸ್ತೆಯ ಮೇಲೆ ಹರಿದ ನೀರು
SAGAR: ಸಾಗರ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಗೆ ಎಸ್.ಪಿಎಂ ರಸ್ತೆಯಲ್ಲಿ ನೀರು ತುಂಬಿ ಹರಿಯಿತು. ಬೈಕ್ ಗಳು ಅರ್ಧ ಚಕ್ರ ಮುಳುಗುವಷ್ಟು ನೀರು ರಸ್ತೆಯ ಮೇಲೆ ಹರಿಯುತ್ತಿತ್ತು. ಬಿಸಿಲಿನಿಂದ ಬೇಸತ್ತ ಜನರಿಗೆ ಮಳೆ ತಂಪೆರಚಿದ.
Agumbe Ghat | ಆಗುಂಬೆ ಘಾಟಿಯಲ್ಲಿ ಕಾರಿನ ಮೇಲೆ ಬಿದ್ದ ಮರ, ಟ್ರಾಫಿಕ್ ಜಾಮ್