‘ಭಾರತ್ ಬಂದ್’ಗೆ ಶಿವಮೊಗ್ಗದಲ್ಲೂ ಭಾರೀ ಬೆಂಬಲ

 

 

ಸುದ್ದಿ ಕಣಜ.ಕಾಂ | CITY | FARMER PROTEST
ಶಿವಮೊಗ್ಗ: ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ಒಂದು ವರ್ಷ ಗತಿಸಿದೆ. ಈ ಹಿನ್ನೆಲೆಯಲ್ಲಿ ಸಂಯುಕ್ತ ಮೋರ್ಚಾ ಸೆಪ್ಟೆಂಬರ್ 27ರಂದು `ಭಾರತ್ ಬಂದ್’ಗೆ ಕರೆ ನೀಡಿದ್ದು, ಶಿವಮೊಗ್ಗದಲ್ಲೂ ಭಾರೀ ಬೆಂಬಲ ವ್ಯಕ್ತವಾಗಿದೆ.
ಈ ಕುರಿತು ಮಾತನಾಡಿದ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಕಳೆದ 10 ತಿಂಗಳಿಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ದೆಹಲಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಇದು ಸರ್ಕಾರದ ಹಠಮಾರಿತನಕ್ಕೆ ಸಾಕ್ಷಿ ಎಂದರು.

ಪಾರಂಪರಿಕವಾಗಿ ಕೃಷಿ ಕ್ಷೇತ್ರ ಖಾಸಗಿ ಹಿಡಿತಕ್ಕೆ ಹೋದರೆ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದರೊಂದಿಗೆ ವಿಮಾನ, ರೈಲ್ವೆ, ವಿದ್ಯುತ್ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಖಾಸಗೀಕರಣಕ್ಕೆ ಒಪ್ಪಿಸುತ್ತಿರುವುದು ಅವೈಜ್ಞಾನಿಕ ಎಂದು ಹೇಳಿದರು.

ಬೊಮ್ಮಾಯಿಯಂತಹ ಭಾಷಾ ಪಂಡಿತರು ಹೀಗೆ ಮಾತನಾಡಬಾರದು
ರೈತ ಮುಖಂಡ ಕೆ.ಟಿ. ಗಂಗಾಧರ್ ಮಾತನಾಡಿ, ರೈತ ಹೋರಾಟವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಾಯೋಜಿತ ಎಂದು ಹೇಳಿದ್ದಾರೆ. ಬೊಮ್ಮಾಯಿಯಂತಹ ಭಾಷಾ ಪಂಡಿತರು ಈ ರೀತಿ ಹೇಳುತ್ತಿರುವುದು ದುರಾದೃಷ್ಟಕರ ಎಂದು ಹೇಳಿದರು.

ಎಲ್ಲ ಸಂಘಟನೆಗಳಿಂದ ಬೆಂಬಲ

ಬಂದ್ ಗೆ ಆಟೋ ಚಾಲಕರು, ಲಾರಿ ಮಾಲೀಕರು, ವ್ಯಾಪಾರಸ್ಥರು, ಉದ್ಯಮಿಗಳು, ಅಂಗಡಿ ಮಾಲೀಕರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಪ್ರಮುಖರಾದ ಕೆ.ಎಲ್.ಅಶೋಕ್, ಕೆ.ಪಿ. ಶ್ರೀಪಾಲ್, ಎನ್. ರಮೇಶ್, ಎಸ್. ಶಿವಮೂರ್ತಿ, ಝೀಫಾನ್, ಆಫ್ತಾಪ್ ಪರ್ವೀಜ್, ಟಿ.ಎಚ್. ಹಾಲೇಶಪ್ಪ, ಶಾಂತವೀರ್ ನಾಯ್ಕ್ ಉಪಸ್ಥಿತರಿದ್ದರು.

https://www.suddikanaja.com/2021/09/18/cannabis-testing-kits-shortly-starts-in-shivamogga/

error: Content is protected !!