GOLD PRICE | ಬಂಗಾರ ಪ್ರಿಯರಿಗೆ ಶಾಕಿಂಗ್ ಸುದ್ದಿ, ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ದರವೆಷ್ಟು, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

 

 

ಸುದ್ದಿ ಕಣಜ.ಕಾಂ | KARNATAKA | COMMERCE NEWS
ಬೆಂಗಳೂರು: ನಿರಂತರ ಇಳಿಯುತ್ತಲೇ ಸಾಗಿದ್ದ ಚಿನ್ನ(ಹಳದಿ ಲೋಹ)ದ ಬೆಲೆ ಕಳೆದ ಎರಡು ದಿನಗಳಿಂದ ಮರು ಏರಿಕೆ ಆಗುತ್ತಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನಕ್ಕೆ ಸೆಪ್ಟೆಂಬರ್ 21 ಅನ್ನು 20ಕ್ಕೆ ಹೋಲಿಸಿದ್ದಲ್ಲಿ 22 ಕ್ಯಾರಟ್ ಚಿನ್ನದ ಬೆಲೆಯು 200 ರೂಪಾಯಿ ಹಾಗೂ 24 ಕ್ಯಾ.ಗೆ 230 ರೂ. ಏರಿಕೆಯಾಗಿತ್ತು. ಕ್ರಮವಾಗಿ ಸೆ.22ರಂದು 22 ಕ್ಯಾ.ಗೆ 350 ರೂ. ಮತ್ತು 24 ಕ್ಯಾ.ಗೆರ 380 ರೂ. ಹೆಚ್ಚಿದೆ. ಸೆಪ್ಟೆಂಬರ್ 13ರಿಂದ 22ರ ವರೆಗೆ ಸೆ.15ರಂದು ಬೆಲೆ ಏರಿಕೆಯಾಗಿತ್ತು. ಅದಾದ ನಂತರ ಈಗ ಮತ್ತೊಮ್ಮೆ ಹಳದಿ ಲೋಹದ ದರ ಚೇತರಿಕೆಯತ್ತ ಸಾಗಿದೆ.

gold rate copyಚಿನ್ನದ ದರ ಇಳಿಮುಖವಾಗಿದ್ದು ಯಾವಾಗಿಂದ?
2021ರ ಜೂನ್ 11ರಂದು (ಪ್ರತಿ 10 ಗ್ರಾಂ) 22 ಕ್ಯಾರೆಟ್ ಚಿನಕ್ಕೆ 46,100 ರೂ. ಹಾಗೂ 24 ಕ್ಯಾರೆಟ್ ಗೆ 50,300 ರೂ. ಬೆಲೆ ಇತ್ತು. ಅದೇ ಕೊನೆ ಅದಾದ ನಂತರ ನಿರಂತರ ಚಿನ್ನದ ಬೆಲೆ ಇಳಿಕೆಯಾಗುತ್ತಲೇ ಇದೆ. ಜೂನ್ 12ರಂದು 22 ಕ್ಯಾ.ಗೆ 45,750 ರೂ., 24 ಕ್ಯಾ.ಗೆ 49,900 ರೂ., 13ರಂದು 22 ಕ್ಯಾ.ಗೆ 45,750 ರೂ., 24 ಕ್ಯಾ.ಗೆ 49,890 ರೂ. ಜೂ.21ರ ವರೆಗೆ ಬೆಲೆ ಇದೇ ರೀತಿ ಸಾಗಿತ್ತು. ಅಲ್ಲಿಂದ ಮತ್ತೆ ಬೆಲೆಯಲ್ಲಿ ಚೇತರಿಕೆಯಾಗಿತ್ತು. ಸೆಪ್ಟೆಂಬರ್ 15ರ ವರೆಗೆ ಏರಿಳಿತದೊಂದಿಗೆ ಸಾಗಿದ್ದ ಚಿನ್ನದ ಬೆಲೆ 16ರ ರಿಂದ ಇಳಿಕೆಯಾಗಲು ಆರಂಭವಾಗಿದೆ. ಸೆ.22ರಂದು 22 ಕ್ಯಾರಟ್ ಗೆ 43,850, 24 ಕ್ಯಾ.ಗೆ 47,840 ರೂ.ಬೆಲೆ ನಿಗದಿಯಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಚಿನ್ನದ ಬೆಲೆ (ರೂಪಾಯಿಗಳಲ್ಲಿ)
ದಿನಾಂಕ 22 ಕ್ಯಾರಟ್ 24 ಕ್ಯಾರಟ್
ಸೆ.13 43990 47990
ಸೆ.14 43990 47990
ಸೆ.15 44330 48330
ಸೆ.16 44000 48000
ಸೆ.17 43400 47350
ಸೆ.18 43400 47350
ಸೆ.19 43400 47350
ಸೆ.20 43300 47230
ಸೆ.21 43500 47460
ಸೆ.22 43850 47840

https://www.suddikanaja.com/2021/09/19/gold-price-decline-2/

error: Content is protected !!