
ಸುದ್ದಿ ಕಣಜ.ಕಾಂ | INTER NATIONAL | TECH NEWS
ಆಗಿನ್ನೂ ಇಂಟರ್’ನೆಟ್ ಆರಂಭದ ಕಾಲ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ (smart phone) ಇರದಿದ್ದರೂ 2-ಜಿ ಸ್ಪೀಡ್ ನ ಬೇಸಿಕ್ ಸೆಟ್’ಗಳಿದ್ದವು. ಅದರಲ್ಲಿಯೇ ಜಗತ್ತಿನ ಯಾವುದೇ ವಿಚಾರಗಳನ್ನು ಬೇಕಾದರೂ ಹುಡುಕಲು ಸಹಾಯ ಮಾಡಿದ ಮಾರ್ಗದರ್ಶಕನೇ ‘ಇಂಟರ್’ನೆಟ್ ಎಕ್ಸ್’ಪ್ಲೋರರ್(ಐಇ) Internet Explorer’.
READ | ಅಡಿಕೆ ಧಾರಣೆಯ ಬಗ್ಗೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಮಹತ್ವದ ಹೇಳಿಕೆ, ಕೇಂದ್ರಕ್ಕೆ ಭೇಟಿ ನೀಡಲಿದೆ ನಿಯೋಗ
ನೈಂಟೀಸ್ ನಲ್ಲಿ ಹುಟ್ಟಿದ 2-ಜಿಯಿಂದ 5-ಜಿ ಜಗತ್ತನ್ನು ಕಾಣುತ್ತಿರುವ ಪ್ರತಿಯೊಬ್ಬರಿಗೂ ಈ ಐಇ ಗೊತ್ತಿರಲೇಬೇಕು. ಅದರೊಂದಿಗೆ ಅಂಬೆಗಾಲು ಇಡುತ್ತ ಜ್ಞಾನಾರ್ಜನೆ ಮಾಡಿದ್ದು ನೆನಪಿನಲ್ಲಿ ಇರಲೇಬೇಕು. ಆದರೆ ಈ ಮೈಕ್ರೋಸಾಫ್ಟ್ (Microsoft)ನ ಅತ್ಯಂತ ಹಳೆಯ ಬ್ರೌಸರ್ ಐಇ 27 (IE) ವರ್ಷಗಳ ಜರ್ನಿಯನ್ನು ಪೂರ್ಣಗೊಳಿಸಿ ಕಾಲದಲ್ಲಿ ಕಳೆದುಹೋಗಿದೆ.
1995ರ ಆಗಸ್ಟ್ 16ರಂದು ಥಾಮಸ್ ರಿಡ್ರೋನ್ (Thomas Reardon) ಅವರು ಸ್ಥಾಪಿಸಿದ ಈ ಇಂಟರ್’ನೆಟ್ ಎಕ್ಸ್’ಪ್ಲೋರರ್ 2022ರ ಜೂನ್ 15ರಂದು ಕಾರ್ಯಾರಂಭ ನಿಲ್ಲಿಸಿದೆ. ಕಳೆದ ಮೇ ತಿಂಗಳಲ್ಲಿ ಮೈಕ್ರೋಸಾಫ್ಟ್ ವೆಬ್ ಸೈಟ್ ಮೂಲಕ ಐಇ ನಿವೃತ್ತಿಯನ್ನು ಘೋಷಿಸಲಾಗಿತ್ತು. ಅದರಂತೆ ಕಾರ್ಯಾರಂಭ ಸ್ಥಗಿತಗೊಳಿಸಿದೆ. ಗ್ರಾಹಕರಿಗೆ ಮೈಕ್ರೋಸಾಫ್ಟ್ ಎಡ್ಜ್ ಗೆ ವರ್ಗಾವಣೆ ಆಗುವಂತೆ ಸೂಚನೆ ನೀಡಿದೆ. ಜೂನ್ 15ರಿಂದ ಎಡ್ಜ್ ಗೆ ರಿಡೈರೆಕ್ಟ್ ಮಾಡಲಾಗಿದೆ.
ವಿಂಡೋಸ್ 95ರ ಆಡ್ ಆನ್ ಪ್ಯಾಕೇಜ್
ಐಇ 1995ರಲ್ಲಿ ವಿಂಡೋಸ್ 95ರ ಆಡ್ ಆನ್ ಪ್ಯಾಕೇಜ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದನ್ನು ಪ್ಯಾಕೇಜ್ ಭಾಗವಾಗಿಯೇ ಗ್ರಾಹಕರಿಗೆ ಉಚಿತವಾಗಿ ನೀಡಲಾಗಿತ್ತು. ಪರಿಣಾಮ 2003ರಲ್ಲಿ ಶೇ.95ರಷ್ಟು ಬಳಕೆದಾರರನ್ನು ಹೊಂದಿತ್ತು. ಕಾಲ ಕಳೆದಂತೆ, ಹೊಸ ಬ್ರೌಸರ್ ಗಳು ಲಗ್ಗೆ ಇಟ್ಟಿದ್ದೇ ಐಇ ಬಳಕೆದಾರರಲ್ಲಿ ಭಾರಿ ಇಳಿಕೆಯಾಯಿತು.
ಅಜ್ಜಿಯ ತಿಥಿಗೆ ಬಂದಿದ್ದ ಮೊಮ್ಮಗ ಸಾವು, ವಿಧಿಯ ಘೋರ ಆಟಕ್ಕೆ ಕಣ್ಮುಚ್ಚಿದ ಯುವಕ