WESTERN GHAT | ಕಾಳಿಂಗ ಸರ್ಪದಲ್ಲಿ 4 ಪ್ರಬೇಧ ಇರುವುದು ಅಧ್ಯಯನದಿಂದ ಸಾಬೀತು, ಕಂಡುಕೊಂಡ ಸತ್ಯಾಂಶಗಳೇನು‌ ಗೊತ್ತಾ, ಕಿಂಗ್ ಕೋಬ್ರಾ ಪೂರ್ಣ ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ | KARNATAKA | WILD LIFE
ಶಿವಮೊಗ್ಗ: ಇವರು ಕಾಳಿಂಗ ಸರ್ಪ (ಕಿಂಗ್ ಕೋಬ್ರಾ) ಬಗ್ಗೆ ನಡೆಸಿದ ಸುದೀರ್ಘ ಏಳು ವರ್ಷಗಳ ತಪಸ್ಸು ಕೈಗೂಡಿದೆ. ಇದುವರೆಗೆ ಕಾಳಿಂಗದಲ್ಲಿ ಒಂದೇ ಜಾತಿ ಇರುವುದಾಗಿ ನಂಬಲಾಗಿತ್ತು.‌ ಆದರೆ,‌ ಅಧ್ಯಯನ ಪ್ರಕಾರ ನಾಲ್ಕು ಪ್ರಬೇಧದ ಕಾಳಿಂಗ ಸರ್ಪಗಳಿರುವುದು ದೃಢಪಟ್ಟಿದೆ.

gawrish king cobra3
ಅಧ್ಯಯನ ನಿರತ‌ ಗೌರಿಶಂಕರ್

ಈ ಬಗ್ಗೆ ಬುಧವಾರ ಮಾಧ್ಯಮಗೋಷ್ಠಿ ಕರೆದಿದ್ದ ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಗೌರಿಶಂಕರ್‌ ಹಲವು ಸತ್ಯಾಂಶಗಳನ್ನು ಬಹಿರಂಗ ಪಡಿಸಿದ್ದಾರೆ.
ನಾಲ್ಕು ಪ್ರಬೇಧದ ಹಾವು ಪತ್ತೆ
‘ಜಗತ್ತಿನಲ್ಲಿ ನಾಲ್ಕು ಪ್ರಭೇದಗಳ ಕಾಳಿಂಗ ಸರ್ಪಗಳನ್ನು ಮೊದಲ ಸಲ ಅಧ್ಯಯನದ‌ ಮೂಲಕ ಕಂಡುಕೊಂಡಿದ್ದೇನೆ. ಪಶ್ಚಿಮಘಟ್ಟಗಳು, ಆಂಧ್ರಪ್ರದೇಶ, ಉತ್ತರಾಖಂಡ್, ಪಿಲಿಫೈನ್ ದೇಶ ಮತ್ತಿತರ ಕಡೆಗಳಲ್ಲಿ ಕಾಳಿಂಗ ಸರ್ಪಗಳು ಕಂಡು ಬರುತ್ತವೆ. ಆದರೆ, ಪಶ್ಚಿಮಘಟ್ಟದಲ್ಲಿ ಮಾತ್ರ ಇದರ ವೈವಿಧ್ಯತೆ ಇದೆ. ಈ ಪ್ರಭೇದಗಳನ್ನು ಸರ್ಪದ ಮೇಲಿನ ‘ಪಟ್ಟಿ’ಗಳ ಆಧಾರದ ಮೇಲೆ ವಿಂಗಡಿಸಬಹುದಾಗಿದೆ ಎಂದರು.

gawrish king cobra
ಪ್ರಯೋಗಾಲಯದಲ್ಲಿ‌ ಕಾಳಿಂಗ ಸರ್ಪದ ಬಗ್ಗೆ ಅಧ್ಯಯನ.

ದೇಹದ ಮೇಲಿರುವ ಪಟ್ಟೆಗಳ ಸಂಖ್ಯೆಯಲ್ಲೂ ಬದಲಾವಣೆ
ಆಗುಂಬೆ ಹಾಗೂ ಪಶ್ಚಿಮ ಘಟ್ಟದಲ್ಲಿರುವ ಕಾಳಿಂಗ ಸರ್ಪಗಳಿಗೆ 45 ಪಟ್ಟಿ ಇರುತ್ತವೆ. ಅದೇ, ಆಂಧ್ರಪ್ರದೇಶ ಮತ್ತು ಉತ್ತರಾಖಂಡ್ ಗಳಲ್ಲಿ ಪಟ್ಟಿಗಳ ಸಂಖ್ಯೆ 60, ಪಿಲಿಫೈನ್ ಮುಂತಾದ ದೇಶಗಳಲ್ಲಿ ಇದರ ಸಂಖ್ಯೆ 70 ಕ್ಕೆ ಏರಿರುತ್ತದೆ ಎಂದರು.
ಭಾರತದಲ್ಲಿ ಸಾಮಾನ್ಯವಾಗಿ ಕಾಳಿಂಗ ಸರ್ಪಗಳು 15 ಅಡಿ ಉದ್ದವಿರುತ್ತವೆ. ಆದರೆ, ವಿದೇಶಗಳಲ್ಲಿ 18 ಅಡಿಗೂ ಹೆಚ್ಚು ಉದ್ದವಿರುವ ಕಾಳಿಂಗ ಸರ್ಪಗಳಿವೆ ಎಂದು ತಿಳಿಸಿದರು.

ಕಾಳಿಂಗ ಸರ್ಪಗಳ ಸಂಖ್ಯೆ ಇಳಿಕೆಯಾದರೆ ಮನುಷ್ಯರಿಗೆ ಆಪತ್ತು! ಎಷ್ಟು ಪ್ರಭೇದದ ಕಿಂಗ್ ಕೋಬ್ರಾಗಳಿವೆ? (VIDEO REPORT)

ಕಾಳಿಂಗ ಸರ್ಪಗಳ ಬಗ್ಗೆ 7 ವರ್ಷಗಳಿಂದ ಪಿ.ಎಚ್.ಡಿ. ಗಾಗಿ ಅಧ್ಯಯನ ನಡೆಸುತ್ತಿದ್ದೇನೆ. ಅಧ್ಯಯನ ಪೂರ್ಣಗೊಂಡಿದೆ. ಬರುವ ದಿನಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸುವೆ.
ಗೌರಿಶಂಕರ್, ಉರಗ ತಜ್ಞ

ಫಿಲಿಫೈನ್ಸ್ ಭಾಗದಲ್ಲಿ‌ ಹೆಚ್ಚು ಮಾರಣ ಹೋಮ
ಭಾರತದಲ್ಲಿ ಕಾಳಿಂಗ ಸರ್ಪಗಳನ್ನು ಕೊಲ್ಲುವುದಿಲ್ಲ. ಹಾಗಾಗಿ ಇವುಗಳ ಸಂಖ್ಯೆ ಇಲ್ಲಿ ಹೆಚ್ಚಾಗಿದೆ. ಆದರೆ, ಪಿಲಿಫೈನ್ಸ್ ಮುಂತಾದ ಕಡೆಗಳಲ್ಲಿ ಈ ಹಾವುಗಳನ್ನು ಕೊಲ್ಲುವುದರಿಂದ ಅಲ್ಲಿ ಸಂಖ್ಯೆ ಕಡಿಮೆಯಾಗಿದೆ ಎಂದರು.

https://www.suddikanaja.com/2021/01/31/talagunda-inscription/

ಡ್ರಗ್ಸ್ ಗಾಗಿ ಸ್ನೇಕ್‌ವೆನಮ್ ದೊಡ್ಡ ರಪ್ಪು ಕಲ್ಪನೆ
ಕಿಂಗ್ ಕೋಬ್ರಾ ಅತ್ಯಂತ‌ ವಿಷಕಾರಿ. ಆದರೆ ಇದರೊಂದಿಗೆ ಹಲವು ತಪ್ಪು ಕಲ್ಪನೆಗಳು ಜನರಲ್ಲಿ ಮನೆ ಮಾಡಿವೆ. ಇದರಿಂದ ಡ್ರಗ್ಸ್ ಮಾಡುತ್ತಾರೆ, ಲೀಟರ್ ಗಟ್ಟಲೇ ವಿಷ ಶೇಖರಿಸಲಾಗುತ್ತದೆ. ಇದಕ್ಕೆ ಲಕ್ಷಾಂತರ ಬೆಲೆ ಇದೆ ಎಂಬ ಮಾತುಗಳು ಪ್ರಚಲಿತದಲ್ಲಿವೆ.‌ ಆದರೆ, ಇವೆಲ್ಲ ತಪ್ಪು. ಲೀಟರ್ ಗಟ್ಟಲೇ‌ ವಿಷ ಸಾವಿರಾರು‌ ಹಾವುಗಳಿಂದ‌ ಮಾತ್ರ ಲಭ್ಯವಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

https://www.suddikanaja.com/2021/02/14/kunchatiga-community-meeting-in-shivamogga-demand-for-central-obc/

error: Content is protected !!