ಪ್ರಾವಿಜನ್ ಸ್ಟೋರ್ ಬೀಗ ಮುರಿದು ಹಣ ಬಿಟ್ಟು ಗುಟ್ಕಾ, ಸಿಗರೇಟ್ ಮಾತ್ರ ಕದ್ದ ಕಳ್ಳರು!

 

 

ಸುದ್ದಿ‌ ಕಣಜ.ಕಾಂ | TALUK | CRIME
ಶಿವಮೊಗ್ಗ: ಪ್ರಾವಿಜ಼ನ್ ಸ್ಟೋರ್ ವೊಂದರ ಬೀಗ ಮುರಿದು ಕಳ್ಳರು ಬರೀ ಸಿಗರೇಟ್ ಹಾಗೂ ಗುಟ್ಕಾ ಕಳ್ಳತನ ಮಾಡಿದ ಘಟನೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಆಯನೂರಿನ ಪ್ರಾವಿಜ಼ನ್ ಸ್ಟೋರ್ ನಲ್ಲಿ ಇತ್ತೀಚೆಗೆ ರಾತ್ರಿ ವೇಳೆ ಕಳ್ಳತನ ಮಾಡಲಾಗಿದ್ದು ಅಂದಾಜು ₹75,000 ಮೌಲ್ಯದ ಸಿಗರೇಟ್, ಗುಟ್ಕಾ ಕಳ್ಳತನ ಮಾಡಲಾಗಿದೆ. ಅಂಗಡಿಯಲ್ಲಿ ನಗದು ಹಣ ಸೇರಿದಂತೆ ಬೇರೆಯ ಸಾಮಗ್ರಿಗಳೂ ಇದ್ದವು. ಆದರೆ, ಅದನ್ನು ಮಾತ್ರ ಮುಟ್ಟಿಲ್ಲ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

READ | ಕದ್ದು ಕಾರಿನಲ್ಲಿ ವೃದ್ಧನಿಗೆ ಡಿಕ್ಕಿ, ಮಚ್ಚು ತೋರಿಸಿದವರಿಗೆ ಬಿತ್ತು‌ ಗೂಸಾ, ಮೂವರು ಅರೆಸ್ಟ್, ಒಬ್ಬ ಎಸ್ಕೆಪ್

error: Content is protected !!