ಭದ್ರಾ ಅಭಯಾರಣ್ಯದಲ್ಲಿ ಅಕ್ರಮ ಮರ ಕಡಿತಲೆ, ನಾಲ್ವರು ವಶಕ್ಕೆ, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವೇನು?

 

 

ಸುದ್ದಿ ಕಣಜ.ಕಾಂ | DISTRICT | FOREST
ಶಿವಮೊಗ್ಗ: ಭದ್ರಾ ಅಭಯಾರಣ್ಯ ವ್ಯಾಪ್ತಿಯ ಉಂಬ್ಳೆಬೈಲು- ಕೈದೊಟ್ಲು ನಡುವೆ ಮರ ಕಡಿತಲೆ ಮಾಡಿದ್ದು, ನಾಲ್ವರನ್ನು ವಶಕ್ಕೆ ಪಡೆದು ಒಂದು ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ.

https://www.suddikanaja.com/2021/03/11/leopard-fallen-in-trap/

ನಿರಂತರ ಜ್ಯೋತಿ ವಿದ್ಯುತ್ ಲೈನ್ ನಿರ್ಮಾಣಕ್ಕಾಗಿ ಮರಗಳನ್ನು ಕಡಿತಲೆ‌ ಮಾಡಿದ್ದು, ಇದಕ್ಕೆ ಅರಣ್ಯ ಇಲಾಖೆ ಪರವಾನಗಿ ನೀಡಿರಲಿಲ್ಲ. ಆದರೂ ಅಭಯಾರಣ್ಯ ವ್ಯಾಪ್ತಿಯ ಮರಗಳನ್ನು ಕಡಿತಲೆಗೊಳಿಸಿದ್ದಕ್ಕೆ ವಶಕ್ಕೆ ಪಡೆಯಲಾಗಿದೆ.

REAd | ಶಿವಮೊಗ್ಗದಿಂದ ಐದು ಮಾರ್ಗಗಳಲ್ಲಿ ವಿಮಾನ ಹಾರಾಟ, ನಾಳೆ ಅಂತಿಮ ಪ್ರಸ್ತಾವನೆ

ಆಗಿದ್ದೇನು, ಗ್ರಾಮಸ್ಥರೇನು ಹೇಳುತ್ತಾರೆ?
ಈ ಹಿಂದೆ ಇದ್ದ ಕಂಬಕ್ಕೆ ವಿದ್ಯುತ್ ಲೈನ್ ಹಾಕಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಹೊಸ ಕಂಬ ಅಳವಡಿಸಲಾಗಿದೆ. ಇದಕ್ಕಾಗಿ, ಅರಣ್ಯ ಇಲಾಖೆಗೆ ಅನುಮತಿ ಕೋರಿ ಪತ್ರ ಬರೆಯಲಾಗಿತ್ತು. ಆದರೆ, ಒಪ್ಪಿಗೆ ನೀಡಿರಲಿಲ್ಲ. ಆದರೂ ಮರಗಳನ್ನು ಕಡಿತಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
‘ನಿರಂತರ ಜ್ಯೋತಿ ವಿದ್ಯುತ್ ಲೈನ್‌ಗಾಗಿ ಉಂಬ್ಳೆಬೈಲಿನಿಂದ ಕೈದೂಡ್ಲು ಗ್ರಾಮಕ್ಕೆ ಮೂರು ಕಿಮೀ ದೂರ ಕಂಬ ಹಾಕಿ, ಲೈನ್ ಹಾಕುವಾಗ ಅರಣ್ಯ ಇಲಾಖೆ ಏನು ಮಾಡುತಿತ್ತು ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

https://www.suddikanaja.com/2021/03/10/man-sentenced-jail-for-cutting-teak/

error: Content is protected !!