ನಾಯಿಯೊಂದಿಗೆ ವಾಯು ವಿಹಾರಕ್ಕೆ ಹೋಗುವ ಮುನ್ನ ಹುಷಾರ್! ಶ್ವಾನದೊಂದಿಗೆ ವಾಕಿಂಗ್ ಗೆ ಹೋಗಿದ್ದ ನವ ವಿವಾಹಿತೆ ಕೆರೆಗೆ ಬಿದ್ದು ಸಾವು

 

 

ಸುದ್ದಿ ಕಣಜ.ಕಾಂ | TALUK | CRIME
ತೀರ್ಥಹಳ್ಳಿ: ನವ ವಿವಾಹಿತೆಯೊಬ್ಬಳು ಶ್ವಾನದೊಂದಿಗೆ ವಾಕಿಂಗ್ ಹೋಗಿದ್ದು, ಶವವು‌ ಕೆರೆಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಶ್ಚಿತಾ(26) ಎಂಬಾಕೆಯೇ ಮೃತಪಟ್ಟ ನವ ವಿವಾಹಿತೆ. ಮೂಲತಃ ಹುಲಿಕಲ್ ಗ್ರಾಮದ ನಿಶ್ಚಿತಾಳಿಗೆ ಮೂರು ತಿಂಗಳ ಹಿಂದಷ್ಟೇ ತೀರ್ಥಹಳ್ಳಿ ತಾಲೂಕಿನ ಉಂಟೂರುಕಟ್ಟೆ ಕೈಮರದ ಮಂಜುನಾಥ್ ಎಂಬುವವರಿಗೆ ವಿವಾಹವಾಗಿದ್ದರು.
ವಾಯುವಿಹಾರಕ್ಕೆ ಹೋಗಿದ್ದಾಗ ಶ್ವಾನವು ಕೆರೆಯತ್ತ ನುಗ್ಗಿದ್ದು, ನಿಶ್ಚಿತಾ ಚೈನ್ ಹಿಡಿದುಕೊಂಡಿದ್ದು, ಈ ವೇಳೆ ಘಟನೆ ನಡೆದಿರಬಹುದು ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆದಿದೆ.

error: Content is protected !!