ಭದ್ರಾವತಿಯಲ್ಲಿ ಸಾಲ‌ ಬಾಧೆ ತಾಳದೇ ಮಗಳಿಗೆ ನೇಣು ಹಾಕಿ, ತಾನೂ ನೇಣಿಗೆ ಶರಣಾದ ಮಹಿಳೆ

 

 

ಸುದ್ದಿ ಕಣಜ.ಕಾಂ | TALUK | CRIME
ಭದ್ರಾವತಿ: ಯಕಿನ್ಸ್ ಕಾಲೊನಿಯಲ್ಲಿ‌ ಮಹಿಳೆಯೊಬ್ಬರು ಮಗಳಿಗೆ ನೇಣು ಹಾಕಿ‌ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.
35 ವರ್ಷದ ಮಹಿಳೆಯು ತನ್ನ ಗಂಡ ವ್ಯವಹಾರದಿಂದ ಉಂಟಾದ ನಷ್ಟದಿಂದಾಗಿ ಮಾಡಿದ ಸಾಲವನ್ನು ತೀರಿಸಲು ಕಷ್ಟವಾಗಿರುವ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು 11 ವರ್ಷದ ಮಗಳನ್ನು ಸೀರೆಯಿಂದ ಫ್ಯಾನಿಗೆ ನೇಣು ಹಾಕಿ ಸಾಯಿಸಿ ನಂತರ ಸೀರೆಯ ಇನ್ನೊಂದು ತುದಿಗೆ ತಾನು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ.
ಮೃತಳ ತಂದೆ ನೀಡಿದ ದೂರಿನ ಮೇರೆಗೆ ಹೊಸಮನೆ ಪೊಲೀಸ್ ಠಾಣೆ‌ ಕೊಲೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

error: Content is protected !!