ಕೃಷಿಯಲ್ಲಿ ಕುಲಾಂತರಿ ಪ್ರಯೋಗಕ್ಕೆ ರೈತರ ವಿರೋಧ, ಸರ್ಕಾರದ ನಿರ್ಧಾರ ಬದಲಿಸದಿದ್ದರೆ ಹೋರಾಟದ ಎಚ್ಚರಿಕೆ

 

 

ಸುದ್ದಿ ಕಣಜ.ಕಾಂ | KARNATAKA | AGRICULTURE
ಶಿವಮೊಗ್ಗ: ಜೈವಿಕ ತಂತ್ರಜ್ಞಾನ (ಬಿ.ಟಿ.) ಅಥವಾ ಕುಲಾಂತರಿಯನ್ನು ಕೃಷಿ ಕ್ಷೇತ್ರದಲ್ಲಿ ಜಾರಿಗೆ ತರಲು ಹೊರಟಿರುವ ಸರ್ಕಾರದ ನಿರ್ಧಾರವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ‌ ಹಸಿರು ಸೇನೆ ಕಟುವಾಗಿ ವಿರೋಧಿಸಿದೆ.
ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ರೈತ ಸಂಘ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್, ಕುಲಾಂತರಿ ಪದ್ಧತಿ ಕೃಷಿಗೆ ಮಾರಕವಾಗಲಿದೆ. ಇದು ಭಾರತದ ಪಾರಂಪರಿಕ ಕೃಷಿಯನ್ನೇ ವಿನಾಶ ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

READ | ಶಿವಮೊಗ್ಗದಲ್ಲಿ ಕುರಿಗಳ ಸಾಮೂಹಿಕ ಸಾವು, ಹೃದಯವಿದ್ರಾವಕ ಘಟನೆಯ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ವಾರ್

ಕೇಂದ್ರ ಮತ್ತು ರಾಜ್ಯ ಸರ್ಕಾರ ಕುಲಾಂತರಿ ಪ್ರಯೋಗಕ್ಕೆ ಮುಂದಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಬಿ.ಟಿ.ಯನ್ನು ತಿರಸ್ಕರಿಸಿವೆ. ಯುರೋಪಿನ 28ಕ್ಕೂ ಹೆಚ್ಚು ದೇಶಗಳು ಇದನ್ನು ಒಪ್ಪಿಲ್ಲ. ಭಾರತದ ಕೇರಳ, ತಮಿಳುನಾಡು, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒರಿಸ್ಸಾ, ಛತ್ತೀಸ್ ಘಡ್, ಗುಜರಾತ್ ಕೂಡ ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ, ಕರ್ನಾಟಕ‌ ಕೂಡ ಇದನ್ನು ತಿರಸ್ಕರಿಸಬೇಕು. ಒಂದುವೇಳೆ, ವಿಓಧದ ನಡುವೆಯೂ ಜಾರಿಗೆ ತಂದರೆ ಬೃಹತ್ ಪ್ರತಿಭಟನೆ ರೂಪಿಸುವುದು ಅನಿವಾರ್ಯ ಆಗಲೊದೆ ಎಂದು ಎಚ್ಚರಿಕೆ ನೀಡಿದರು.
ಪ್ರಮುಖರಾದ ವೀರೇಶ್, ಯಶವಂತರಾವ್ ಘೋರ್ಪಡೆ, ಸಣ್ಣರಂಗಪ್ಪ, ಎಚ್.ಪಿ. ಹಿರಣ್ಣಯ್ಯ, ಮೋಹನ್, ಜಗದೀಶ್ ನಾಯ್ಕ್, ಪಾಂಡುರಂಗಪ್ಪ ಉಪಸ್ಥಿತರಿದ್ದರು.

https://www.suddikanaja.com/2021/06/17/demand-to-change-structure-of-shivamogga-airport/

error: Content is protected !!