ASSISTANT PROFESSOR RECRUITMENT | ಸಹಾಯಕ‌ ಪ್ರಾಧ್ಯಾಪಕ ಹುದ್ದೆಗಳ‌ ನೇಮಕಾತಿಗೆ ಭರಪೂರ ಅವಕಾಶ, ವಿಷಯವಾರು ಹುದ್ದೆ ಗಳ ಮಾಹಿತಿ‌ ಇಲ್ಲಿದೆ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಹಲವು ದಿನಗಳಿಂದ ಕಾಯುತಿದ್ದ ಉದ್ಯೋಗ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.
ವಿವಿಧ ವಿಷಯಗಳಲ್ಲಿ‌ ರಾಜ್ಯದಾದ್ಯಂತ ಖಾಲಿ‌‌ ಇರುವ 1,242 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಬೋಧನಾ ವೃತ್ತಿಗಾಗಿ‌ ಕಾಯುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಅಕ್ಟೋಬರ್ 7 ರಿಂದ ನವೆಂಬರ್ 6ರ ವರೆಗೆ ಆನ್‌ಲೈನ್‌ ಮೂಲಕ‌ ಅರ್ಜಿ ಸಲ್ಲಿಕೆ ಅವಕಾಶ ನೀಡಲಾಗಿದೆ.

READ | ಮಿಟ್ಲಗೋಡು ಕಾಡಿನ ಮರ್ಡರ್ ಮಿಸ್ಟ್ರಿ ಭೇದಿಸಿದ ಪೊಲೀಸ್, ಕುಟುಂಬದಲ್ಲೇ ಅವಿತಿದ್ದ ಹಂತಕರು ಸಿಕ್ಕಿದ್ದು ಹೇಗೆ ಗೊತ್ತಾ?

ರಾಜ್ಯದ ಎಲ್ಲೆಲ್ಲಿ‌ಪರೀಕ್ಷಾ ಕೇಂದ್ರಗಳಿವೆ?
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಲಾಗುತಿದ್ದು, ರಾಜ್ಯದ ಬೆಂಗಳೂರು, ಮೈಸೂರು, ಶಿವಮೊಗ್ಗ, ಧಾರವಾಡ, ಕಲಬುರಗಿ, ಮಂಗಳೂರಿನಲ್ಲಿ ಪರೀಕ್ಷೆಗಳು ಜರುಗಲಿವೆ.
ವಿಷಯವಾರು ಹುದ್ದೆಗಳ ಸಂಖ್ಯೆ
ಕನ್ನಡ – 107, ಇಂಗ್ಲಿಷ್ – 84, ಹಿಂದಿ – 10,‌ಉರ್ದು -‌‌9,‌ಇತಿಹಾಸ – 109,‌ಅರ್ಥಶಾಸ್ತ್ರ – 122, ರಾಜ್ಯಶಾಸ್ತ್ರ – 98,‌ಸಮಾಜ ಶಾಸ್ತ್ರ – 49,ಶಿಕ್ಷಣ ಶಾಸ್ತ್ರ – 2,‌ಕಾನೂನು – 17, ಸಮಾಜ ಕಾರ್ಯ – 5, ಭೂಗೋಳ ಶಾಸ್ತ್ರ – 8,‌ಭೂಗರ್ಭ ಶಾಸ್ತ್ರ – 5,‌ವಾಣಿಜ್ಯ ಶಾಸ್ತ್ರ – 198,‌ನಿರ್ವಹಣಾ ಶಾಸ್ತ್ರ – 15, ಭೌತಶಾಸ್ತ್ರ – 76,‌ರಸಾಯನಶಾಸ್ತ್ರ- 85,‌ಜೈವಿಕ ರಸಾಯನ ಶಾಸ್ತ್ರ – 5, ಗಣಿತಶಾಸ್ತ್ರ – 75,‌ಸೂಕ್ಷ್ಮ ಜೀವಶಾಸ್ತ್ರ -5, ಪ್ರಾಣಿಶಾಸ್ತ್ರ – 31, ಸಸ್ಯಶಾಸ್ತ್ರ – 51,‌ಎಲೆಕ್ಟ್ರಾನಿಕ್ಸ್‌ – 4, ಗಣಕವಿಜ್ಞಾನ – 63,‌ಸಂಖ್ಯಾ ಶಾಸ್ತ್ರ- 6, ಫ್ಯಾಶನ್‌ ಟೆಕ್ನಾಲಜಿ- 3 ಈ ಎಲ್ಲ‌ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

READ | ಸೈನಿಕ ಶಾಲೆಯಲ್ಲಿ‌ ನಡೆಯಲಿದೆ‌ ವಿವಿಧ ಹುದ್ದೆಗಳ ಭರ್ತಿ, ಕೈತುಂಬ ಸಂಬಳ

ಡಿಸೆಂಬರ್ ನಲ್ಲಿ ಪರೀಕ್ಷೆಗಳು ನಡೆಯಲಿವೆ. ಅಭ್ಯರ್ಥಿಗಳು ಕಡ್ಡಾಯವಾಗಿ ಕಡ್ಡಾಯ ಕನ್ನಡ, ಇಂಗ್ಲಿಷ್ ನಲ್ಲಿ‌ ಪಾಸಾಗಬೇಕು. ಈ‌ ಎರಡು ಪರೀಕ್ಷೆಗಳು ಹೊರತುಪಡಿಸಿ ಎಲ್ಲವೂ ಬಹು ಆಯ್ಕೆಯದ್ದಾಗಿರಲಿವೆ. 2015ರಲ್ಲಿ ಭರ್ತಿ ಆಗದೇ ಇರುವ 16 ವಿಷಯಗಳಿಗೆ ಸಂಬಂಧಿಸಿದ 145 ಹುದ್ದೆಗಳನ್ನು ಈ‌ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

WEBSITE AND NOTIFICATION

https://www.suddikanaja.com/2021/09/29/jobs-in-bel/

error: Content is protected !!