ಶಿವಮೊಗ್ಗದಲ್ಲಿ ಹೆಚ್ಚಿದ ಗಾಂಜಾ ಗಮ್ಮತ್ತು, ನಿಮ್ಮನ್ನು ಗಾಂಜಾ ಪೆಡ್ಲರ್ ಎನ್ನಬಹುದೆ?

 

 

ಸುದ್ದಿ ಕಣಜ.ಕಾಂ | CITY | POLITICAL NEWS
ಶಿವಮೊಗ್ಗ: ನಗರದಲ್ಲಿ ಗಾಂಜಾ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆರೋಪಿಸಿದರು.

ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನು ಡ್ರಗ್ಸ್ ಪೆಡ್ಲರ್, ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿ ಎಂದು ಟೀಕಿಸುತ್ತಿದ್ದಾರೆ. ಹಾಗಾದರೆ, ಕೆ.ಎಸ್. ಈಶ್ವರಪ್ಪನವರ ಕ್ಷೇತ್ರದಲ್ಲಿಯೇ ಗಾಂಜಾ ಮಾರಾಟ ಎಗ್ಗಿಲ್ಲದೆ ಪೂರೈಕೆ ಆಗುತ್ತಿದೆ. ಹಾಗಂತ ಅವರನ್ನು ಗಾಂಜಾ ಪೆಡ್ಲರ್ ಎಂದು ಕರೆಯಲಾದೀತೆ ಎಂದು ಪ್ರಶ್ನಿಸಿದರು.

ಸರ್ಕಾರಿ ಕಚೇರಿಯಲ್ಲಿ ಕೆಲಸಗಳು ಸಕಾಲಕ್ಕೆ ಆಗುತ್ತಿಲ್ಲ.ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಹಣ ಲೂಟಿ ಮಾಡಲಾಗುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಮಂಜೂರು ಆಗಿದ್ದ ಸಿಟಿಗಳ ಪೈಕಿ 30 ಮಾತ್ರ ಬಂದಿದ್ದು, ಅವುಗಳನ್ನು ನಗರ ವ್ಯಾಪ್ತಿಯಲ್ಲಿ ಓಡಿಸುತ್ತಿಲ್ಲ. ಈ ಎಲ್ಲವುಗಳ ಬಗ್ಗೆ ಕ್ಷೇತ್ರದ ಶಾಸಕರು ಏಕೆ ಗಮನಹರಿಸುತ್ತಿಲ್ಲ ಎಂದು ಹೇಳಿದರು.
ಪ್ರಮುಖರಾದ ಬೊಮ್ಮನಕಟ್ಟೆ ಮಂಜುನಾಥ್, ಎನ್.ಕೆ.ಶಾಮಸುಂದರ್, ಆರ್.ಕೆ. ಉಮೇಶ್, ದೀಪಕ್ ಸಿಂಗ್, ಶಾಮೀರ್ ಖಾನ್ ಉಪಸ್ಥಿತರಿದ್ದರು.

https://www.suddikanaja.com/2021/02/11/one-more-tusker-site-in-umblebailu-forest-area-people-panic/

error: Content is protected !!