ಸುದ್ದಿ ಕಣಜ.ಕಾಂ | CITY | RAIN FALL
ಶಿವಮೊಗ್ಗ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಸುರಿಯುತ್ತಿರುವ ಧಾರಾಕಾರ ಮಳೆ ಶಿವಮೊಗ್ಗ ನಗರದ ಹಲವೆಡೆ ಅನಾಹುತ ಸೃಷ್ಟಿಸಿದೆ.
ಚರಂಡಿಯ ನೀರು ಹರಿದು ಹೋಗಲಾಗದೇ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗಿದೆ. ಇದರಿಂದಾಗಿ, ಮನೆಯ ಸಾಮಗ್ರಿಗಳು ಹಾಳಾಗಿವೆ.
ರಸ್ತೆಗಳು ಜಲಾವೃತಗೊಂಡಿವೆ. ಮಳೆ ಇದೇ ರೀತಿ ಮುಂದುವರಿದರೆ ಇನ್ನಷ್ಟು ಅನಾಹುತಗಳಾಗುವ ಸಾಧ್ಯತೆ ಇದೆ.