WEATHER NEWS | ಶಿವಮೊಗ್ಗದಲ್ಲಿ‌ ಗುಡುಗು ಸಹಿತ ಭಾರೀ‌ ಮಳೆ, ಶುರುವಾಯ್ತು ಆತಂಕ

 

 

ಸುದ್ದಿ ಕಣಜ.ಕಾಂ | DISTRICT | RAIN FALL
ಶಿವಮೊಗ್ಗ: ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಂದ ಭಾರಿ ಗುಡುಗು ಸಹಿತ ಮಳೆಯಾಗುತಿದ್ದು, ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಭೀತಿ ಎದುರಾಗಿದೆ.

READ | ಮಿಟ್ಲಗೋಡು ಕಾಡಿನ ಮರ್ಡರ್ ಮಿಸ್ಟ್ರಿ ಭೇದಿಸಿದ ಪೊಲೀಸ್, ಕುಟುಂಬದಲ್ಲೇ ಅವಿತಿದ್ದ ಹಂತಕರು ಸಿಕ್ಕಿದ್ದು ಹೇಗೆ ಗೊತ್ತಾ?

ರಾತ್ರಿ ಏಕಾಏಕಿ ಧಾರಾಕಾರವಾಗಿ ಮಳೆ ಸುರಿಯುತಿದ್ದು, ಈಗಾಗಲೇ‌ ರಸ್ತೆಗಳು ಜಲಮಯವಾಗಿವೆ. ಸ್ಮಾರ್ಟ್‌ ಸಿಟಿ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಂತೂ ಭಾರಿ‌ ಪ್ರಮಾಣದ ನೀರು ತುಂಬಿವೆ. ಜನ ಆತಂಕದಲ್ಲಿಯೇ ಜನ ಸಂಚರಿಸುವಂತಾಗಿದೆ.
ಗುಡುಗಿನ ಸದ್ದು ಮುಂದುವರಿದಿದ್ದು, ರಾತ್ರಿಯಿಡೀ ಮಳೆ ಆಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ವರ್ಷಧಾರೆ ಮುಂದುವರಿಯಲಿದೆ.

error: Content is protected !!