ಶಿವಮೊಗ್ಗದಲ್ಲಿ ಭಾರೀ ಮಳೆ, ಸಂಜೆಯ ನಂತರ ಶುರುವಾಯ್ತು ಗುಡುಗು, ಮಿಂಚು, ತಗ್ಗು ಪ್ರದೇಶದವರಲ್ಲಿ ಆತಂಕ

 

 

ಸುದ್ದಿ ಕಣಜ.ಕಾಂ | DISTRICT | RAIN FALL
ಶಿವಮೊಗ್ಗ: ಜಿಲ್ಲೆಯ ಹಲವೆಡೆ ಸಂಜೆಯ ನಂತರ ಗುಡುಗು, ಮಿಂಚು ಸಹಿತ ಭಾರಿ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯು ನೀಡಿರುವ ಮುನ್ಸೂಚನೆಯಂತೆ ಮಳೆಯಾಗುತ್ತಿದೆ.
ಗುರುವಾರ ಬೆಳಗಿನ ಜಾವ ಕೂಡ ವರ್ಷಧಾರೆಯಾಗಿದ್ದು, ಇಡೀ ದಿನ ಸುಡು ಬಿಸಿಲು, ಆರ್ದೃತೆ ಇತ್ತು. ರಾತ್ರಿ ಏಕಾಏಕಿ ಮಳೆ ಸುರಿಯಲಾರಂಭಿಸಿದೆ.

ತಗ್ಗು ಪ್ರದೇಶದವರಲ್ಲಿ ಆತಂಕ

ಶಿವಮೊಗ್ಗ ನಗರದ ಹೊಸಮನೆ, ಗೋಪಾಳ, ಹಳೇ ಶಿವಮೊಗ್ಗದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಆತಂಕ ಎದುರಾಗಿದೆ. ಅಕ್ಟೋಬರ್ ಮೊದಲನೇ ವಾರದಲ್ಲಿ ಸುರಿದ ಮಳೆಯು ನಗರದ ಹಲವೆಡೆ ಭಾರಿ ಅನಾಹುತವನ್ನೇ ಮಾಡಿತ್ತು. ಈಗ ಮತ್ತೆ ಮಳೆಯಾಗುತ್ತಿದ್ದು, ತಗ್ಗು ಪ್ರದೇಶದಲ್ಲಿ ವಾಸವಾಗಿರುವವರಲ್ಲಿ ಆತಂಕ ಮನೆ ಮಾಡಿದೆ.

error: Content is protected !!