ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ರೈಲ್ವೆ ಬ್ರಿಡ್ಜ್ ಕಾಮಗಾರಿ ಇರುವುದರಿಂದ ಪುರಲೆ ಮತ್ತು ಜಾವಳ್ಳಿ 11 ಕೆ.ವಿ. ಮಾರ್ಗ ಮುಕ್ತತೆ ನೀಡಲಾಗಿದ್ದು, ಜೂನ್ 7, 8ರಂದು ನಗರದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಗುರುಪುರ, ಪುರಲೆ, ಶಾಂತಮ್ಮ ಲೇಔಟ್, ಚಿಕ್ಕಲ್, ಸಿದ್ದೇಶ್ವರನಗರ, ಹಸೂಡಿ ರಸ್ತೆ, ವೆಂಕಟೇಶನಗರ, ಸುಬ್ಬಯ್ಯ ಆಸ್ಪತ್ರೆ, ಹೊಳೆಬೆನವಳ್ಳಿ, ಪಿಳ್ಳಂಗಿರಿ, ಜಾವಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇನ್ನೆಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಜೂನ್ 8 ರಂದು ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-9 ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಗರದ ಶುಭಮಂಗಳ ಕಲ್ಯಾಣ ಮಂಟಪ ಮುಂಭಾಗ, ರಾಣಿ ಚೆನ್ನಮ್ಮ ರಸ್ತೆ ಸೈಕಲ್ ಲೋಕ, ಕರ್ನಾಟಕ ಬ್ಯಾಂಕ್, ವಿನೋಬನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಜೂನ್ 8 ರಂದು ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-11 ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಗರದ ಸವಿ ಬೇಕರಿ ಕೆಳಭಾಗ, ಸೂಡಾ ಕಚೇರಿ, ಆದರ್ಶ ಕಾಲೋನಿ, ಕೆಂಚಪ್ಪ ಲೇಔಟ್, ವಿನೋಬನಗರ 100 ಅಡಿ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.