ಶಿವಮೊಗ್ಗ ಮಹಾನಗರ ಅಧಿಕ ತೆರಿಗೆ ವಿರುದ್ಧ ಕಾನೂನು ಹೋರಾಟಕ್ಕೆ‌ ಸಿದ್ಧತೆ, ಬೆಂಬಲಿಸಲು ಅರ್ಜಿ ಭರ್ತಿ ಮಾಡಿ ಇಲ್ಲಿಗೆ ಸಲ್ಲಿಸಿ, 8 ಕಡೆ ಅರ್ಜಿ ಲಭ್ಯ

 

 

ಸುದ್ದಿ ಕಣಜ.ಕಾಂ | CITY | PROPERTY TAX
ಶಿವಮೊಗ್ಗ: ಮಹಾನಗರ ಪಾಲಿಕೆ ವಿಧಿಸಿರುವ ಅಧಿಕ ತೆರಿಗೆ ವಿರುದ್ಧ ನಾನಾ ಹಂತಗಳ ಹೋರಾಟಗಳನ್ನು ಸಂಘಟಿಸಿರುವ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಕಾನೂನು ಸಮರಕ್ಕೆ ಸಿದ್ಧತೆ ನಡೆಸಿದೆ.
ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅವೈಜ್ಞಾನಿಕ ಆಸ್ತಿ ತೆರಿಗೆ ವಿಧಿಸಿರುವುದರಿಂದ‌ ಸಾರ್ವಜನಿಕರಿಗೆ ಭಾರಿ ತೊಂದರೆ ಆಗುತ್ತಿದೆ. 2021-22ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹಣೆಯೇ ಕಾನೂನು ಬಾಹಿರವಾಗಿದ್ದು, ಪಾಲಿಕೆ ಸಭೆಯಲ್ಲಿ ಇದರ ಬಗ್ಗೆ ಚರ್ಚೆಯೇ ನಡೆದಿಲ್ಲ. ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿದರು.

ಪಾಲಿಕೆಗೆ ಅರ್ಜಿ‌ ಸಲ್ಲಿಸಿ

ಈಗಾಗಲೇ ಅರ್ಜಿ ಪಾವತಿಸಿದ್ದಲ್ಲಿ ಅಂತಹವರು ಅದನ್ನು ವಾಪಸ್ ಕೊಡುವಂತೆ ಹಾಗೂ ಕಟ್ಟದೇ ಇರುವವರು ಹೆಚ್ಚುವರಿ ತೆರಿಗೆ ಪಾವತಿಸಲಾಗದು. ಹಳೇ ಮಾದರಿಯಲ್ಲೇ ತೆರಿಗೆ ಪಾವತಿಸುವ ಬಗ್ಗೆ ಪಾಲಿಕೆಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು.
ಎಲ್ಲೆಲ್ಲಿ ಅರ್ಜಿಗಳು ಲಭ್ಯ?
ಒಕ್ಕೂಟದಿಂದ‌ ಸಿದ್ಧಪಡಿಸಲಾಗಿರುವ ಅರ್ಜಿಗಳನ್ನು ಶ್ರೀ ನಿಧಿ ಟೆಕ್ಸ್ ಟೈಲ್ಸ್, ಗಾಂಧಿ ಬಜಾರ್‌ ನ ಸಾಕ್ರೆ ಟೆಕ್ಸ್ ಟೈಲ್ಸ್, ಶಂಕರ ಮಠ ರಸ್ತೆಯಲ್ಲಿರುವ ಓಂ ಗಣೇಶ್ ಮೋಟರ್ಸ್, ಗಜಾನನ ಕಾಫೀ ವರ್ಕ್ಸ್, ಪವರ್ ಗ್ಲಾಸ್ ಆ್ಯಂಡ್ ಪ್ಲೈವುಡ್ಸ್, ಗೋಪಾಳದ ದೇವಕಿ ಜೆರಾಕ್ಸ್, ರವೀಂದ್ರ ನಗರದ ಏಳನೇ ಕ್ರಾಸ್ ನಲ್ಲಿರುವ ಕೆ.ವಿ ವಸಂತ್ ಕುಮಾರ್ ಅವರ ಕಚೇರಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘ ಹೀಗೆ 8 ಕಡೆ ಅರ್ಜಿ‌ ಲಭ್ಯ ಇವೆ. ಆ ಅರ್ಜಿಗಳನ್ನು ಪಡೆದು ಪಾಲಿಕೆಗೆ ಅಥವಾ‌ ಆಯಾ ಜಾಗದಲ್ಲೇ ನೀಡುವಂತೆ ಮನವಿ ಮಾಡಿದರು.
ಅರ್ಜಿ ನೀಡುವುದರಿಂದ ಏನು ಪ್ರಯೋಜನ
ತೆರಿಗೆ ವಿರೋಧಿಸಿ ಕಾನೂ‌ನು ಹೋರಾಟ ಮಾಡಲು‌ ಉದ್ದೇಶಿಸಲಾಗಿದೆ. ಅದಕ್ಕಾಗಿ, ಈ‌ ಅರ್ಜಿಗಳು ಸಹಕಾರಿಯಾಗಲಿವೆ. ಆದ್ದರಿಂದ‌,‌ ತೆರಿಗೆದಾರರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾ ಎಸ್.ಬಿ. ಅಶೋಕ್ ಕುಮಾರ್, ಸತೀಶ್ ಕುಮಾರ್ ಶೆಟ್ಟಿ, ಅಶ್ವಥ್ ನಾರಾಯಣ ಶೆಟ್ಟಿ, ವೆಂಕಟ್ ನಾರಾಯಣ್, ಸೀತಾರಾಮ್ ಉಪಸ್ಥಿತರಿದ್ದರು.

https://www.suddikanaja.com/2021/06/02/covid-third-wave-may-hit-children-preparation-made-in-shivamogga/

error: Content is protected !!