power cut in shivamogga: ಶಿವಮೊಗ್ಗದಲ್ಲಿ ಮೂರು ದಿನ ಕರೆಂಟ್ ಇರಲ್ಲ

 

 

ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ನಗರದ ಹಲವೆಡೆ ಅಕ್ಟೋಬರ್ 23, 25 ಹಾಗೂ 26ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಅ.23ರಂದು ಮಂಡ್ಲಿ ವಿದ್ಯುತ್ ವಿತರಣೆ ಕೇಂದ್ರಕ್ಕೆ ಸಂಪರ್ಕ ಹೊಂದಿರುವ ದುರ್ಗಿಗುಡಿ 11 ಕೆವಿ ಮಾರ್ಗವನ್ನು ಭೂಗತ ಕೇಬಲ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಸ್ಪನ್ ಪೋಲ್ ಅಳವಡಿಕೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹೀಗಾಗಿ, ಅಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಗಾರ್ಡನ್ ಏರಿಯಾ 1 ರಿಂದ 3 ಅಡ್ಡರಸ್ತೆಗಳು, ಸವಾರ್ ಲೈನ್ ರಸ್ತೆ, ಎಲ್.ಎಲ್.ಆರ್ ರಸ್ತೆ, ಗೋಪಿವೃತ್ತ, ಜೆಪಿಎನ್ ರಸ್ತೆ ಹಾಗೂ ದುರ್ಗಿಗುಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಲಿಗಲಿದೆ ಎಂದು ಶಿವಮೊಗ್ಗ ನಗರ ಉಪ ವಿಭಾಗ 2ರ ಸಹಾಯಕ ಎಂಜಿನಿಯರ್ ತಿಳಿಸಿದ್ದಾರೆ.

ಎರಡು ದಿನ ಪವರ್ ಕಟ್
ಹೊಸ 11 ಕೆ.ವಿ. ಮಾರ್ಗದ ಕೆಲಸ ಇರುವುದರಿಂದ ಅಕ್ಟೋಬರ್ 25 ಮತ್ತು 26ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಶಿವಬಸವನಗರ, ಇಂದಿರಾಗಾಂಧಿ ಬಡಾವಣೆ, ವೀರಭದ್ರೇಶ್ವರ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ನಗರ ಉಪ ವಿಭಾಗ 1ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

error: Content is protected !!