ಸುದ್ದಿ ಕಣಜ.ಕಾಂ | NATIONAL | ECONOMICS NEWS
ನವದೆಹಲಿ: ದಿನ ಬೆಳಗಾದರೆ ಆನ್ಲೈನ್ ಮೂಲಕ ಎಟಿಎಂ ಫ್ರಾಡ್ ಮಾಡುತ್ತಿರುವ ಸುದ್ದಿಗಳು ಎಲ್ಲೆಡೆ ಕೇಳಿ ಬರುತ್ತಲೇ ಇವೆ. ಇದರ ತಡೆಗೆ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ವಿಭಾಗ ನಿರಂತರ ಜಾಗೃತಿ ಮೂಡಿತ್ತಲೇ ಇದೆ. ಆದರೂ ಆನ್ಲೈನ್ ವಂಚನೆ ಎಗ್ಗಿಲ್ಲದೇ ನಡೆಯುತ್ತಿದೆ.
ಈ ಕಾರಣಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹೊಸದೊಂದು ಹೆಜ್ಜೆ ಇಡುತ್ತಿದೆ. ಅದರನ್ವಯ, ಲಕ್ಷಾಂತರ ಎಸ್.ಬಿ.ಐ ಗ್ರಾಹಕರಿಗೆ ಈ ನಿಯಮಗಳು ಅನ್ವಯ ಆಗಲಿವೆ.
ಒಟಿಪಿ ಆಧಾರಿತ ವಿಥ್ ಡ್ರಾ
ಆನ್ಲೈನ್ ವಂಚನೆ ತಡೆಗಾಗಿ ಎಸ್.ಬಿ.ಐ ಒಟಿಪಿ (one time password) ಆಧರಿಸಿ ಎಟಿಎಂ (Automated teller machine)ನಿಂದ ಹಣಪಡೆಯುವ ಪ್ರಕ್ರಿಯೆಗೆ ಮುಂದಾಗಿದೆ.
ಹೊಸ ಪದ್ಧತಿಯ ಏನು ಪ್ರಯೋಜನ?
ಈ ವಿಧಾನದಿಂದ ಅಪರಿಚತ ವ್ಯಕ್ತಿಗೆ ಒಂದು ವೇಳೆ ಕಾರ್ಡ್ ಮತ್ತು ಅದರ ಪಾಸ್ ವರ್ಡ್ ಸಿಕ್ಕರೂ ಅದರ ಪ್ರಯೋಜನ ಆಗದು. ಕಾರಣ, ಪ್ರತಿ ಹಣ ಪಡೆಯುವುದಾಗಲೂ ಎಟಿಎಂನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಎಟಿಎಂ ಕಳುಹಿಸಲಾಗುತ್ತದೆ. ಅದನ್ನು ನಮೂದಿಸದ ಹೊರತು ಹಣ ಪಡೆಯಲಾಗದು. ಎಸ್.ಬಿ.ಐ ಎಟಿಎಂಗಳಲ್ಲಿ ಈ ಆಧುನಿಕ ವ್ಯವಸ್ಥೆ ಜಾರಿಗೆ ಬರಲಿದೆ. ವಂಚನೆ ತಪ್ಪಿಸಲು ಇದೊಂದು ಮಹತ್ವದ ನಿರ್ಧಾರವಾಗಿದೆ.
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
https://www.suddikanaja.com/2021/10/07/recruitment-of-specialist-cadre-officers-in-sbi/