Today vegetable rate | ಶಿವಮೊಗ್ಗದಲ್ಲಿ ತರಕಾರಿ ಬೆಲೆ ಗಗನಮುಖಿ, ದಾಖಲೆಯತ್ತ ಕ್ಯಾರಟ್, ಕ್ಯಾಪ್ಸಿಕಮ್ ದರ, ಇನ್ನೂ ಏರಿಕೆಯಾಗಲಿದೆ ರೇಟ್!

 

 

ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಒಂದೆಡೆ ಪೆಟ್ರೋಲ್, ಡೀಸೆಲ್ ಬೆಲೆ ನಿರಂತರ ಏರಿಕೆ ಕಾಣುತ್ತಿದೆ. ಅದರ ನಡುವೆಯೇ ರಾಜ್ಯದಾದ್ಯಂತ ಸುರಿದ ಧಾರಾಕಾರ ಮಳೆಗೆ ತರಕಾರಿ ದರವೂ ಗಗನಮುಖಿಯಾಗಿ ಸಾಗುತ್ತಿದೆ. ಇದರಿಂದ ಗ್ರಾಹಕರು ಮತ್ತು ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಕಳೆದ ಒಂದು ವಾರದಿಂದ ಜಿಲ್ಲೆಗೆ ಸರಿಯಾಗಿ ತರಕಾರಿ ಪೂರೈಕೆ ಆಗುತ್ತಿಲ್ಲ. ಸಿಕ್ಕರೂ ಅದರಲ್ಲಿ ಶೇ.10-15ರಷ್ಟು ಹಾಳಾಗಿರುತ್ತದೆ. ಇದು ವ್ಯಾಪಾರಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಮಳೆಯಿಂದಾಗಿ ತರಕಾರಿಗಳು ಗದ್ದೆಯಲ್ಲಿಯೇ ಕೊಳೆಯುತ್ತಿವೆ. ಅವುಗಳನ್ನು ಮಾರುಕಟ್ಟೆಗೆ ಸಾಗಿಸುವ ಪ್ರಯಾಣ ದರದಲ್ಲೂ ಏರಿಕೆಯಾಗಿದೆ. ಇದು ನೇರವಾಗಿ ತರಕಾರಿ ಬೆಲೆಯ ಮೇಲೆ ಪರಿಣಾಮ ಬೀರುತ್ತಿದೆ. ಇನ್ನೂ ತರಕಾರಿಯ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂಬುವುದು ಮಾರಾಟಗಾರರ ಅಭಿಪ್ರಾಯ.

ಸರಣಿ ಹಬ್ಬಗಳಿಂದಾಗಿ ಮಾರುಕಟ್ಟೆಗೆ ಪೂರೈಕೆಯಾಗದ ತರಕಾರಿ
ಮಳೆ, ತೈಲ ಬೆಲೆಯೊಂದಿಗೆ ಸರಣಿ ಹಬ್ಬಗಳು ಬಂದಿರುವುದರಿಂದ ಗದ್ದೆಗಳಿಂದ ತರಕಾರಿಯನ್ನು ಮಾರುಕಟ್ಟೆಗೆ ತರಲಾಗಿಲ್ಲ. ಹೀಗಾಗಿ, ತರಕಾರಿ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಹಬ್ಬ ಹರಿದಿನಗಳಲ್ಲಿ ಸಹಜವಾಗಿಯೇ ತರಹೇವಾರಿ ಖಾದ್ಯ ಪದಾರ್ಥಗಳನ್ನು ಮಾಡುವುದರಿಂದ ತರಕಾರಿಗೂ ಬೇಡಿಕೆ ಹೆಚ್ಚಿದೆ. ಆದರೆ, ಕಾಯಿಪಲ್ಲ್ಯೆ ಅಂಗಡಿಗಳಲ್ಲೂ ತರಕಾರಿ ಲಭ್ಯವಾಗುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

READ | ಅಮಾಯಕನ ಪ್ರಾಣ ನುಂಗಿದ ಅವೆಂಜರ್ ಬೈಕ್! ಯುವಕನ ಕೊಲೆಗೈದಿದ್ದ ನಾಲ್ವರು ಅರೆಸ್ಟ್

ಈರುಳ್ಳಿ ಸಗಟು ದರವೇ ರೂ.42
ತಿಂಗಳ ಹಿಂದಷ್ಟೇ ಈರುಳ್ಳಿಯ ಬೆಲೆ ಕೆಜಿಗೆ ₹20 ಇತ್ತು. ಈಗ ಈರುಳ್ಳಿಯ ಬೆಲೆಯಲ್ಲೂ ಏರಿಕೆಯಾಗಿದೆ. ಪ್ರತಿ ಕೆಜಿಗೆ ಸಗಟು(ಹೋಲ್ ಸೇಲ್) ದರವೇ ₹42 ಇದೆ. ಅದನ್ನು ಚಿಲ್ಲರೆಯಲ್ಲಿ ₹50-52 ಮಾರಾಟ ಮಾಡಲಾಗುತ್ತಿದೆ. ಹಸಿ ಈರುಳ್ಳಿ ಬೆಲೆ ಕಡಿಮೆ ಇದ್ದರೂ ಅದರ ಖರೀದಿಗೆ ಗ್ರಾಹಕರು ಮತ್ತು ವ್ಯಾಪಾರಿಗಳು ಖರೀದಿಸಲು ಹಿಂದೇಟು ಹಾಕುತಿದ್ದಾರೆ. ಹಸಿ ಈರುಳ್ಳಿ ತಂದರೂ ಅದರ ಸಂರಕ್ಷಣೆಯೇ ದೊಡ್ಡ ಸವಾಲಿನ ಕೆಲಸವಾಗಿದೆ.

ಶಿವಮೊಗ್ಗದಲ್ಲಿ ತರಕಾರಿ ದರ (ಚಿಲ್ಲರೆ)
ತರಕಾರಿ ದರ (ಕೆಜಿಗೆ)
ಟೊಮ್ಯಾಟೊ 40
ಕೊತ್ತಂಬರಿ 10 ಕಟ್ಟು
ಬೀನ್ಸ್ 60
ಪಡವಲುಕಾಯಿ 50
ಈರುಳ್ಳಿ 52
ಕ್ಯಾರೆಟ್ 60-80
ಹೀರೆಕಾಯಿ 40-50
ಬದನೆ 30
ಕ್ಯಾಪ್ಸಿಕಮ್ 80-100

https://www.suddikanaja.com/2021/09/23/gold-rate-decline/

error: Content is protected !!