ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಒಂದೇ ಗ್ರಾಮದ 9 ಮನೆಗಳಲ್ಲಿ ಭಾರೀ ಹಾನಿ, ಮೆಸ್ಕಾಂನಿಂದ ಪರಿಹಾರಕ್ಕೆ ಆಗ್ರಹ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ತಾಲೂಕಿನ ಆಚೆಕೊಪ್ಪ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ 9 ಮನೆಗಳಲ್ಲಿನ ಅಮೂಲ್ಯ ಸಾಮಗ್ರಿಗಳು ಸುಟ್ಟಿವೆ. ಇದಕ್ಕೆ ಮೆಸ್ಕಾಂ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ರಾತ್ರಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಗ್ರಾಮಸ್ಥರಿಗೆ ಅಪಾರ ಹಾನಿಯಾಗಿದೆ. ಇದಕ್ಕೆ ಮೆಸ್ಕಾಂನಿಂದ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮದಲ್ಲಿ ಅಂದು ನಡೆದಿದ್ದೇನು?

ಆಚೇಕೊಪ್ಪ ಗ್ರಾಮದಲ್ಲಿ ಗಂಗಾಕಲ್ಯಾಣ ಯೋಜನೆ ಅಡಿ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕಾಗಿ ಹಳೇ ಸಿಂಗಲ್ ಫೇಸ್ ಸಂಪರ್ಕ ತೆಗೆದು ತ್ರಿಫೇಸ್ ತಂತಿ ಸ್ಥಳಾಂತರ ಮಾಡಲಾಗುತಿತ್ತು. ಆದರೆ, ಇದರಿಂದ ಜನರಿಗೆ ಅಪಾಯ ಇರುವುದಾಗಿ ಮನವಿ ಮಾಡಿದಾಗ ಗ್ರಾಮ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕಂಬ ಬದಲಾವಣೆ ಮಾಡಲಾಗುತಿತ್ತು.
ಈ ಸಂದರ್ಭದಲ್ಲಿ ಹೆಚ್ಚಿನ ವಿದ್ಯುತ್ ಪ್ರವಹಿಸಿ 9 ಆಚೆಕೊಪ್ಪದ ಮನೆಗಳಲ್ಲಿನ ಟಿವಿ, ಮಿಕ್ಸರ್, ಫ್ರಿಡ್ಜ್, ಬಲ್ಬ್, ಮನೆಯ ವೈರಿಂಗ್ ಸೇರಿ ಎಲೆಕ್ಟ್ರಿಕಲ್ ವಸ್ತುಗಳು ಸುಟ್ಟಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

https://www.suddikanaja.com/2021/08/02/fire-accident-due-to-power-short-circuit/

error: Content is protected !!