ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಾಗರ, ತೀರ್ಥಹಳ್ಳಿ, ಭದ್ರಾವತಿ ಮತ್ತು ಶಿವಮೊಗ್ಗ ನಗರದ ಹಲವೆಡೆ ಮಂಗಳವಾರ ರಾತ್ರಿ ಪೊಲೀಸರು ನಡೆಸಿರುವ ಏರಿಯಾ ಡಾಮಿನೇಷನ್’ನಲ್ಲಿ 90ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ.
READ | ಶಿವಮೊಗ್ಗದಲ್ಲಿ ಅನಧಿಕೃತ ರೈಲ್ವೆ ಟಿಕೆಟ್ ಬುಕಿಂಗ್ ಗ್ಯಾಂಗ್ ಪತ್ತೆ, ಮೂವರು ಅರೆಸ್ಟ್, ಎಲ್ಲೆಲ್ಲಿ ದಾಳಿ?
ಎಲ್ಲೆಲ್ಲಿ ದಾಳಿ? ಯಾವ್ಯಾವ ಕೇಸ್?
ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯ ಶೇಷಾದ್ರಿಪುರಂ, ಹೊಳೆ ಬಸ್ ಸ್ಟಾಂಡ್, ವಾಜಪೇಯಿ ಬಡಾವಣೆ, ಗುಡ್ ಲಕ್ ಸರ್ಕಲ್, ಶಿವಮೊಗ್ಗ-ಬಿ ಉಪ ವಿಭಾಗ ವ್ಯಾಪ್ತಿಯ ಬೊಮ್ಮನಕಟ್ಟೆ, ನಾಗೇಂದ್ರ ಕಾಲೋನಿ, ಫ್ರೀಡಂ ಪಾರ್ಕ್, ರೈಲ್ವೆ ಕ್ವಾಟ್ರಸ್, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ* ಸುಭಾಷ್ ನಗರ ಹೊಸಮನೆ, ಪೇಪರ್ ಟೌನ್ ನ ಹಿರಿಯೂರು ಸರ್ಕಲ್, ಹಳೆನಗರದ ಎಂಎಂ ಕಾಂಪೌಂಡ್, ಹೊಳೆಹೊನ್ನೂರಿನ ಕನಸಿನಕಟ್ಟೆ ರಸ್ತೆ, ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ನ ಸುಭಾಷ್ ನಗರ, ಆನಂದಪುರದ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ ಆಯಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು/ ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡವು ದಾಳಿನಡೆಸಿದೆ.
Area Domination ವಿಶೇಷ ಗಸ್ತು ಮಾಡಿ Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಲಾಗಿದೆ. Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಒಟ್ಟು 87 ಲಘು ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ಮೋಟಾರು ವಾಹನ ಕಾಯ್ದೆ (IMV) ಅಡಿಯಲ್ಲಿ 13 ಪ್ರಕರಣಗಳನ್ನು ಹಾಗೂ ಕೊಟ್ಪಾ (COTPA) ಕಾಯ್ದೆ ಅಡಿಯಲ್ಲಿ 7 ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಲಾಗಿದೆ.
Western Ghats | ಚಿಲಿ ಮಾದರಿಯ ಅಗ್ನಿ ಅವಘಡ ಪಶ್ಚಿಮಘಟ್ಟದಲ್ಲಿ ಸಂಭವಿಸುವ ಸಂಭವ, ಎಚ್ಚರಿಕೆ ನೀಡಿದ ನಾಗೇಶ್ ಹೆಗಡೆ