ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪೊಲೀಸರು ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಕಳೆದ ಎರಡು ದಿನಗಳಲ್ಲಿ ನಡೆಸಿದ ಏರಿಯಾ ಡಾಮಿನೇಷನ್‘ನಲ್ಲಿ ಒಟ್ಟು 136 ಲಘು ಪ್ರಕರಣ 4 ಐವಿಎಂ ಹಾಗೂ ಮೂರು ಎನ್.ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
READ | ಶಿವಮೊಗ್ಗಕ್ಕೆ ವಿಮಾನ ಬಂದಿದ್ದೇ ಅರ್ಧ ಗಂಟೆಗೊಂದು ಬಸ್ ಬಿಟ್ಟ KSRTC, ಇಲ್ಲಿದೆ ವೇಳಾಪಟ್ಟಿ
ಗುರುವಾರ ರಾತ್ರಿ ಶಿವಮೊಗ್ಗ-ಎ, ಶಿವಮೊಗ್ಗ-ಬಿ ಮತ್ತು ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪ ನಿರೀಕ್ಷಕರು ಮತ್ತು ಸಿಬ್ಬಂದಿಯ ತಂಡವು ಆಯಾ ಠಾಣಾ ವ್ಯಾಪ್ತಿಯ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮಾಡಿ ಸಾರ್ವಜನಿಕರಿಗೆ ತೊಂದರೆ (Public Nuisance) ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಒಟ್ಟು 48 ಲಘು ಪ್ರಕರಣಗಳನ್ನು ಮತ್ತು 4 IMV ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.
ಗಾಂಜಾ ಸೇವನೆ ದೃಢ, ಮೂವರ ವಿರುದ್ಧ ಕೇಸ್
SHIMOGA: ಮಂಗಳವಾರದಂದು ನಡೆದ ಕಾರ್ಯಾಚರಣೆಯಲ್ಲಿ Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಒಟ್ಟು 96 ಲಘು ಪ್ರಕರಣಗಳನ್ನು ಮತ್ತು 9 COTPA ಕಾಯ್ದೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ 3 ವ್ಯಕ್ತಿಗಳ ವಿರುದ್ಧ NDPS ಕಾಯ್ದೆ ಅಡಿಯಲ್ಲಿ 3 ಪ್ರಕರಣಗಳನ್ನು ದಾಖಲಿಸಲಾಗಿದೆ.
Shimoga Airport | ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ರಾಜ್ಯ ಸರ್ಕಾರ ಪ್ರಮುಖ ಘೋಷಣೆ, ಏನದು?