ಶಿವಮೊಗ್ಗದಲ್ಲಿ ನಕಲಿ ನೋಟುಗಳ ಹಾವಳಿ, ಭದ್ರಾವತಿಯಲ್ಲಿ ಸಿಕ್ತು 500 ಮುಖ ಬೆಲೆಯ 182 ನಕಲಿ ನೋಟುಗಳ ಕಂತೆ, ಇಬ್ಬರು ಅರೆಸ್ಟ್

 

 

ಸುದ್ದಿ ಕಣಜ.ಕಾಂ | TALUK | CRIME NEWS

ಭದ್ರಾವತಿ: ನಕಲಿ ನೋಟುಗಳ ಹಾವಳಿ ಹೆಚ್ಚಿದ್ದು, ನಕಲಿ ನೋಟುಗಳ ಚಲಾವಣೆಗೆ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಭದ್ರಾವತಿಯ ರಂಗಪ್ಪ ವೃತ್ತದ ಸಮೀಪ 500 ಮುಖ ಬೆಲೆಯ ನೋಟುಗಳನ್ನು ಚಲಾಯಿಸುವಾಗ ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಬಂಧಿಸಲಾಗಿದೆ.

FAKE NOTE 2
ಭದ್ರಾವತಿಯಲ್ಲಿ ವಶಕ್ಕೆ ಪಡೆದಿರುವ 500 ಮುಖ ಬೆಲೆಯ ನಕಲಿ ನೋಟುಗಳು.

ಯಾರಾರ ಬಂಧನ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ನಿವಾಸಿ ಅರುಣ್ ಕುಮಾರ್ (23) ಹಾಗೂ ಹರಿಗೆ ನಿವಾಸಿ ಪ್ರೇಮ್ ರಾಜ್ (23) ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರ ಬಳಿ ಸಿಕ್ಕಿದ ನೋಟುಗಳೆಷ್ಟು?

ಬಂಧಿತರಿಂದ 500 ರೂಪಾಯಿ ಮುಖ ಬೆಲೆಯ 182 ನಕಲಿ ನೋಟು ಹಾಗೂ ನಕಲಿ ನೋಟು ತಯಾರಿಸಲು ಬಳಸುವ ಪ್ರಿಂಟರ್ ಜಪ್ತಿ ಮಾಡಲಾಗಿದೆ. 

ಭದ್ರಾವತಿಯ ಹಳೇನಗರ ಪೊಲೀಸ್ ಠಾಣೆಯ ಪಿಐ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ.

https://www.suddikanaja.com/2020/12/23/fake-cigarettes-in-shivamogga-karnataka/

error: Content is protected !!