ಸುದ್ದಿ ಕಣಜ.ಕಾಂ | DISTRICT | RAIN FALL
ಶಿವಮೊಗ್ಗ: ಜಿಲ್ಲೆಯ ನಾನಾ ಭಾಗಗಳಲ್ಲಿ ಮಂಗಳವಾರ ಸಂಜೆಯಿಂದ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ.
ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಮೋಡ ಕವಿದುಕೊಂಡಿದ್ದು, ಆದ್ರ್ರತೆ ಇತ್ತು. ಸಂಜೆ ಏಕಾಏಕಿ ಧಾರಾಕಾರ ಮಳೆ ಸುರಿಯಲಾರಂಭಿಸಿದೆ.
ಮೊನ್ನೆಯಷ್ಟೇ ರಾತ್ರಿಯಷ್ಟೇ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೀಡಾಗಿದ್ದರು. ಮತ್ತೆ ವರ್ಷಧಾರೆಯಾಗುತ್ತಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡಿದ್ದಾರೆ.
ಅಣ್ಣಾನಗರ ಭಾಗದಲ್ಲಿ ಈಗಾಗಲೇ ರಸ್ತೆ ಎಲ್ಲ ಜಲಾವೃತಗೊಂಡಿದ್ದು, ಜನರು ಭೀತಿಯಲ್ಲಿದ್ದಾರೆ.