
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ 3,511 ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಅತ್ಯಂತ ವೈಭವದಿಂದ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ.
ಯಾವ ದಿನ ಎಷ್ಟು ಗಣಪತಿ ವಿಸರ್ಜನೆ?
ಮೊದಲನೆಯ ದಿನ ನಿನ್ನೆ ಸೆ.18ರಂದು 341 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿರುತ್ತಾರೆ. 2ನೇ ದಿನವಾದ ಮಂಗಳವಾರದಂದು 48 ಗಣೇಶ ಮೂರ್ತಿಗಳು, 3ನೇ ದಿನವಾದ ಸೆ.20ರಂದು 989, 4ನೇ ದಿನ ಸೆ.2 ರಂದು 168 ಗಣೇಶ ಮೂರ್ತಿಗಳನ್ನು ಹಾಗೂ 5ನೇ ದಿನವಾದ ಸೆ.22ರಂದು 711 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುವುದು.
READ | ಹಿಂದೂ ಮಹಾಸಭಾ ಗಣೇಶ ಪ್ರತಿಷ್ಠಾಪನೆ, ಗಮನ ಸೆಳೆದ ಚಂದ್ರಯಾನ 3 ಗಣೇಶ, ಎಲ್ಲೆಲ್ಲಿ ಏನು ವಿಶೇಷ?
ಶಿವಮೊಗ್ಗ ನಗರದಲ್ಲಿ ಪಥ ಸಂಚಲನ
SHIMOGA: ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ಮಂಗಳವಾರ ಸಂಜೆ ನಗರದಲ್ಲಿ ರೂಟ್ ಮಾರ್ಚ್ (ಪಥ ಸಂಚಲನ) ಮಾಡಲಾಯಿತು.
ಎಲ್ಲೆಲ್ಲಿ ರೂಟ್ ಮಾರ್ಚ್
ರೂಟ್ ಮಾರ್ಚ್ ಅನ್ನು ನಗರದ ಮುರಾದ್ ನಗರ ದಿಂದ ಪ್ರಾರಂಭಿಸಿ, ಬಿಬಿ ರಸ್ತೆಯಿಂದ ಎಂಕೆಕೆ ರಸ್ತೆ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಎಸ್.ಪಿ. ಎಂ ರಸ್ತೆ ಮುಖಾಂತರವಾಗಿ ಬಂದು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಮುಕ್ತಾಯ ಮಾಡಲಾಯಿತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ, ಶಿವಮೊಗ್ಗ ಎ ಉಪ ವಿಭಾಗದ ಡಿವೈಎಸ್.ಪಿ ಬಿ.ಬಾಲರಾಜ್, ಶಿವಮೊಗ್ಗ ಬಿ ಉಪ ವಿಭಾಗದ ಡಿವೈಎಸ್.ಪಿ ಸುರೇಶ್, ಡಿಎಆರ್ ಡಿವೈಎಸ್.ಪಿ ಪಿ.ಕೃಷ್ಣಮೂರ್ತಿ, ನಗರದ ಪೊಲೀಸ್ ವೃತ್ತ ನಿರೀಕ್ಷಕರು, ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು, ಡಿಎಆರ್ ಪೊಲೀಸ್ ಅಧಿಕಾರಿ ಸಿಬ್ಬಂದಿ, ಕೆಎಸ್ಆರ್.ಪಿ, ಸಿವಿಲ್ ಪೊಲೀಸ್ ಅಧಿಕಾರಿ ಸಿಬ್ಬಂದಿ ಹಾಗೂ ಗೃಹ ರಕ್ಷಕ ಸಿಬ್ಬಂದಿ ಭಾಗವಸಿದ್ದರು.