ಹೊಳೆಹೊನ್ನೂರು-ಶಿವಮೊಗ್ಗ ರಸ್ತೆ ಸರಿಯಿಲ್ಲದ್ದಕ್ಕೆ ಮಾರ್ಗವನ್ನೇ ಬದಲಿಸಿದ ರಾಜ್ಯಪಾಲ ಗೆಹ್ಲೋಟ್! ಅಧಿಕಾರ ನಡೆ ಚರ್ಚೆಗೆ ಗ್ರಾಸ

 

 

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಹೊಳೆಹೊನ್ನೂರಿನಿಂದ ಶಿವಮೊಗ್ಗಕ್ಕೆ ರಸ್ತೆ ಸರಿಯಿಲ್ಲದ್ದಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (thawar chand gehlot )ಅವರನ್ನು ಹೊಳಲೂರು ಮಾರ್ಗದಿಂದ ಕರೆದುಕೊಂಡು ಬರಲಾಗಿದೆ.

ಗೆಹ್ಲೋಟ್ ಅವರು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವಾಗ ಚಿತ್ರದುರ್ಗದಿಂದ ಹೊಳೆಹೊನ್ನೂರು ಮೂಲಕ ಮಲೆನಾಡ ಹೆಬ್ಬಾಗಿಲಿಗೆ ಬರಬೇಕಿತ್ತು. ಆದರೆ, ರಸ್ತೆ ಸುವ್ಯವಸ್ಥೆಯಲ್ಲಿ ಇಲ್ಲದ್ದಕ್ಕೆ ಹತ್ತಿರದ ಮಾರ್ಗವನ್ನು ಬಿಟ್ಟು ಹೊಳಲೂರ ಮೂಲಕ ಕರೆದುಕೊಂಡು ಬರಲಾಯಿತು.
follow us in link tree

ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ
ಹೊಳೆಹೊನ್ನೂರು-ಶಿವಮೊಗ್ಗ ಮಾರ್ಗ ಗುಂಡಿಗಳಿಂದ ಆವೃತ್ತವಾಗಿದೆ ಎಂಬ ಕಾರಣಕ್ಕೆ ರಾಜ್ಯಪಾಲರನ್ನು ಅರಹತೊಳಲು ಕೈಮರದಿಂದ 28 ಕಿ.ಮೀ ದೂರದ ಹೊಳಲೂರು ಮಾರ್ಗವಾಗಿ ಕರೆತರಲಾಗಿದೆ.
ಅಧಿಕಾರಿಗಳ ಈ ನಡೆಯು ಭಾರಿ ಚರ್ಚೆಗೆ ಗ್ರಾಸವಾಗಿದೆ. ರಸ್ತೆ ಸಂಪೂರ್ಣ ಹಾಳಾಗಿದ್ದನ್ನು ಅದನ್ನು ರಿಪೇರಿ ಮಾಡದ ಅಧಿಕಾರಿಗಳು ರಾಜ್ಯಪಾಲರನ್ನು ಇನ್ನೊಂದು ಮಾರ್ಗದ ಮೂಲಕ ಕರೆದುಕೊಂಡು ಹೋಗಿದ್ದಾರೆ. ನಿತ್ಯ ಸಾರ್ವಜನಿಕರು ಇದೇ ಮಾರ್ಗದಲ್ಲಿ ಓಡಾಡುತಿದ್ದು ರಸ್ತೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮಣ್ಣು ಹಾಕಿ ಗುಂಡಿ ಮುಚ್ಚಿದ ಪಿಡಬ್ಲ್ಯುಡಿ

ರಾಜ್ಯಪಾಲರು ಶಿವಮೊಗ್ಗಕ್ಕೆ ತೆರಳಲಿರುವ ಸುಮಾರು 5-6 ಕಿ.ಮೀ. ಮಾರ್ಗದಲ್ಲಿಯ ಗುಂಡಿಗಳನ್ನು ಪಿಡಬ್ಲ್ಯುಡಿ ಅಧಿಕಾರಿಗಳು ಜಲ್ಲಿ ಹಾಕಿ ಮುಚ್ಚಿಸಿದ್ದರು. ಗ್ರಾಮದಲ್ಲಿ ಬ್ಯಾರಿಕೆಡ್ ಗಳನ್ನು ಹಾಕಿ ಭದ್ರತೆಯನ್ನೂ ಒದಗಿಸಲಾಗಿತ್ತು. ಕೈಮರ, ಸನ್ಯಾಸಿಕೋಡಮಗ್ಗಿ, ಹೊಳಲೂರು ಮಾರ್ಗವಾಗಿ ರಾಜ್ಯಪಾಲರು ಶಿವಮೊಗ್ಗಕ್ಕೆ ಬುಧವಾರ ಆಗಮಿಸಿದ್ದಾರೆ.

https://www.suddikanaja.com/2021/10/14/deputy-commissioner-grama-vastavya/

error: Content is protected !!