ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೋವಿಡ್ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ ಎರಡು ರೈಲುಗಳನ್ನು ಶಿವಮೊಗ್ಗದಿಂದ ಪುನರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
READ |ಅಗ್ನಿವೀರ್ ವಾಯು ಹುದ್ದೆಗಳ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಲು ಅವಕಾಶ
2019-20ರಲ್ಲಿ ಪ್ರಾರಂಭಗೊಂಡಿದ್ದ ಶಿವಮೊಗ್ಗ- ರೇಣಿಗುಂಟ (ತಿರುಪತಿ) (shivamogga-renigunta) ಹಾಗೂ ಶಿವಮೊಗ್ಗ-ಬೆಂಗಳೂರು- ಮದ್ರಾಸ್ (shivamogga- bengaluru- madras) ಎಕ್ಸ್ ಪ್ರೆಸ್ ವಾರಕ್ಕೆ ಎರಡು ಬಾರಿ ಸಂಚರಿಸುತ್ತಿದ್ದು ಕೋವಿಡ್ ಹಿನ್ನೆಲೆಯಲ್ಲಿ ದೇಶದಾದ್ಯಂತ ರೈಲು ಸೇವೆಗಳನ್ನು ನಿಲುಗಡೆ ಮಾಡಿದ ಸಂದರ್ಭದಲ್ಲಿ ಈ ಎರಡು ರೈಲು ಸೇವೆಗಳನ್ನು ಸಹ ರೈಲ್ವೆ ಇಲಾಖೆಯಿಂದ ಹಿಂಪಡೆಯಲಾಗಿತ್ತು. ಆದರೆ ಈಗ ವಿಶೇಷ ರೈಲ್ವೆ ಸೇವೆಯನ್ನು ಮತ್ತೆ ಮುಂದುವರೆಸಲಾಗಿದೆ.
ಯಾವಾಗ ರೈಲುಗಳ ಸಂಚಾರ?
ರೈಲು ಸಂಖ್ಯೆ 06223 ಶಿವಮೊಗ್ಗ- ಮದ್ರಾಸ್ ರೈಲು ಪ್ರತಿ ಭಾನುವಾರ ಮತ್ತು ಮಂಗಳವಾರ ಶಿವಮೊಗ್ಗದಿಂದ ಸಂಜೆ 7ಕ್ಕೆ ಹಾಗೂ ರೈಲು ಸಂಖ್ಯೆ 06224 ಮದ್ರಾಸ್- ಶಿವಮೊಗ್ಗ ರೈಲು ಪ್ರತಿ ಸೋಮವಾರ ಮತ್ತು ಬುಧವಾರ ಮದ್ರಾಸ್ಸಿನಿಂದ ಮಧ್ಯಾಹ್ನ 3.30 ಕ್ಕೆ ಪ್ರಯಾಣಿಸಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಲಾಗಿದೆ.
ಶಿವಮೊಗ್ಗ ಜೈಲಲ್ಲಿ ಬಂಧಿಗಳ ಸಂದರ್ಶನ ಪುನರಾರಂಭ, ಷರತ್ತುಗಳನ್ವಯ ಭೇಟಿಗೆ ಅವಕಾಶ