ಕಾಲು ಜಾರಿ ಬಾವಿಗೆ ಬಿದ್ದ ಯುವಕನ ಸಾವು

 

 

ಸುದ್ದಿ ಕಣಜ.ಕಾಂ | TALUK A| CRIM NEWS
ಹೊಸನಗರ: ತಡೆಗೋಡೆ ಇಲ್ಲದ ತೆರೆದ ಬಾವಿಗೆ ಕಾಲು ಜಾರಿ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ರಿಪ್ಪನ್‍ಪೇಟೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

FOLLOW US copy

ಸಾಗರ ರಸ್ತೆಯ ವಿನಾಯಕ ನಗರದ ಆಂಜನೇಯ (25) ಎಂಬುವವರು ಮೃತಪಟ್ಟಿದ್ದಾರೆ. ರಾತ್ರಿ ಹೊತ್ತಿನಲ್ಲಿ ಬಾವಿ ಇರುವುದು ಸರಿಯಾಗಿ ಕಾಣದೇ ಇರುವುದರಿಂದ ದಾಟುವಾಗ ಕಾಲು ಜಾರಿ ಬಿದ್ದಿದ್ದಾರೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!