ಸರ್ಕಾರಿ ಶಾಲೆ ಮಕ್ಕಳು, ಪೋಷಕರಿಂದ ನ್ಯೂ ಮಂಡ್ಲಿ ರಸ್ತೆ ದಿಢೀರ್ ಬಂದ್!

 

 

ಸುದ್ದಿ ಕಣಜ.ಕಾಂ | SHIVAMOGGA CITY | PROTEST
ಶಿವಮೊಗ್ಗ: ನ್ಯೂ ಮಂಡ್ಲಿ ರಸ್ತೆಯಲ್ಲಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿ, ರಸ್ತೆ ಬಂದ್ ಮಾಡಿದರು. ಶಿಕ್ಷಕರು ಮನವೊಲೈಸಿದರೂ ಯಾರ ಮಾತನ್ನೂ ಕೇಳದೇ ಪ್ರತಿಭಟನೆ ಮುಂದುವರಿಸಲಾಯಿತು.
ಸರ್ಕಾರಿ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭೀತಿಯಲ್ಲಿಯೇ ತರಗತಿಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಯಾವಾಗ ಬೇಕಾದರೂ ಕಟ್ಟಡ ಕುಸಿಯುವ ಸಾಧ್ಯತೆ ಇರುವುದರಿಂದ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಅಧಿಕಾರಿಗಳ ಗಮನಕ್ಕೆ ಬಂದರೂ ಪ್ರಯೋಜನವಾಗಿಲ್ಲ

ಮಳೆ ಸುರಿದರೆ ಶಾಲಾ ಆವರಣದಲ್ಲಿ ಮೊಣಕಾಲುದ್ದ ನೀರು ನಿಲ್ಲುತ್ತವೆ. ಈ ಬಗ್ಗೆಯೂ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಕಳೆದ 5 ವರ್ಷಗಳಿಂದ ಸರ್ಕಾರಿ ಶಾಲೆಯ ಕಟ್ಟಡದ ದುಸ್ಥಿತಿಯ ಕುರಿತು ನಿರಂತರ ಶಿಕ್ಷಣ ಇಲಾಖೆಯ ಗಮನಕ್ಕೆ ತರಲಾಗುತ್ತಿದೆ. ಆದರೆ, ಯಾವ ಪ್ರಯೋಜನವೂ ಆಗಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

follow us in link tree50 ವರ್ಷಗಳ ಹಿಂದೆ ನಿರ್ಮಾಣವಾದ ಕಟ್ಟಡ
ಶಾಲಾ ಕಟ್ಟಡವು 50 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಕಟ್ಟಡದ ಗೋಡೆಗಳು ಹಸಿ ಹಿಡಿಯುತ್ತಿದ್ದು, ಗುಣಮಟ್ಟ ಕಳೆದುಕೊಂಡಿವೆ. ಇದರಿಂದಾಗಿ, ತ್ವರಿತವಾಗಿ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕೆರೆಯಾಗಿ ಮಾರ್ಪಾಟಾಗುವ ಶಾಲಾ ಆವರಣ

ಒಂದು ವಾರದ ಹಿಂದೆ ಸುರಿದ ಮಳೆಯಿಂದ ಶಾಲೆ ಆವರಣದಲ್ಲಿ ನೀರು ನಿಂತು ಕೆರೆಯಾಗಿತ್ತು. ಜಲಾವೃತಗೊಂಡಿದ್ದರಿಂದ ಶಾಲೆಗೆ ರಜೆ ಕೂಡ ನೀಡಲಾಗಿತ್ತು. ಈ ಎಲ್ಲ ಅವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಯಾವ ಕ್ರಮವನ್ನೂ ವಹಿಸಿಲ್ಲ. ಈ ಹಿಂದೆ ಶಾಲೆಗೆ ಭೇಟಿ ನೀಡಿದ ಡಿಡಿಪಿಐ, ಬಿಇಓ ನೀಡಿ ಭರವಸೆ ನೀಡಿದ್ದರು ಎಂದು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಪೋಷಕ ಕುಮಾರ್, ರಾಜು ಹಲವರು ಉಪಸ್ಥಿತರಿದ್ದರು.

https://www.suddikanaja.com/2021/05/25/private-ambulance-owners-protest-in-meggan/

error: Content is protected !!