ಶಿಶುಗಳ ಮರಣ ಪ್ರಮಾಣ ತಗ್ಗಿಸುವ ಲಸಿಕೆ ಕಾರ್ಯಕ್ಕೆ ಶಿವಮೊಗ್ಗದಲ್ಲಿ ಚಾಲನೆ, ಇದು ಸಂಪೂರ್ಣ ಉಚಿತ

 

 

ಸುದ್ದಿ ಕಣಜ.ಕಾಂ | CITY | HEALTH NEWS
ಶಿವಮೊಗ್ಗ: ಶಿಶುಗಳ ಮರಣ ಪ್ರಮಾಣ ತಗ್ಗಿಸಿ, ರೋಗ ನಿರೋಧಕ ಶಕ್ತಿ ವೃದ್ಧಿಸುವ ಲಸಿಕೆಯಾದ ಪಿಸಿವಿ(Pneumococcal conjugate vaccine) ಲಸಿಕೆಯನ್ನು ಸರ್ಕಾರದಿಂದ ಸಂಪೂರ್ಣ ಉಚಿತವಾಗಿ ಶಿಶುಗಳಿಗೆ ನೀಡಲಾಗುತ್ತಿದೆ.
ಈ ಕಾರ್ಯಕ್ಕೆ ಶಿವಮೊಗ್ಗದಲ್ಲಿ ಪಾಲಿಕೆ ಮಾಜಿ ಉಪ ಮೇಯರ್ ಹಾಗೂ ಸದಸ್ಯೆ ಸುರೇಖಾ ಮುರಳೀಧರ್ ಅವರು ಗುರುವಾರ ಬಾಪೂಜಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಿದರು.

ಶಿಶುವಿನ ಉತ್ತಮ ಆರೋಗ್ಯಕ್ಕೆ ಅತ್ಯಂತ ಅವಶ್ಯವಾದ ಹಾಗೂ ದುಬಾರಿಯಾದ ಈ ಲಸಿಕೆಯನ್ನು ಸರ್ಕಾರ ಸಂಪೂರ್ಣ ಉಚಿತವಾಗಿ ನೀಡುತ್ತಿದ್ದು, ತಾಯಂದಿರು ತಮ್ಮ ಶಿಶುಗಳಿಗೆ ಲಸಿಕೆ ಕೊಡಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ರೇಣುಕಾ, ಶುಶ್ರೂಶಕಿ ಜಯ್ಯಮ್ಮ, ನಿರ್ಮಲಾ ಉಪಸ್ಥಿತರಿದ್ದರು.    

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/09/20/fir-against-two-tahasildar-and-others/

error: Content is protected !!