ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಮಗನ ರಾಜಕೀಯ ಜೀವನದ ಬಗ್ಗೆ ಹೀಗೇಕೆ ಹೇಳಿದರು?

 

 

ಸುದ್ದಿ ಕಣಜ.ಕಾಂ | KARNATAKA | POLITCAL NEWS
ಶಿವಮೊಗ್ಗ: `ನಾನು ಮಂತ್ರಿ ಆಗಿರುವವರೆಗೆ ನನ್ನ ಮಗ ಕಾಂತೇಶ್ ಶಾಸಕನಾಗುವುದು ಬೇಡ. ಇದು ನನ್ನ ವೈಯಕ್ತಿಕ ತೀರ್ಮಾನ’ ಎಂದು ಗ್ರಾಮೀಣಾಭಿವೃದ್ಧದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಸಚಿವರು, `ತಾನು ಸಚಿವ ಸ್ಥಾನದಲ್ಲಿರುವವರೆಗೆ ತನ್ನ ಪುತ್ರ ಕಾಂತೇಶ್ ಅವರನ್ನು ವಿಧಾನ ಪರಿಷತ್ತು ಅಥವಾ ವಿಧಾನ ಸಭೆ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಬಾರದು ಎಂದು ತೀರ್ಮಾನ ಕೈಗೊಂಡಿದ್ದೇನೆ. ಆದ್ದರಿಂದ, ಕಾಂತೇಶ್ ಈ ಬಾರಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು.
FOLLOW US copy

ಈ ಕುರಿತು ದೆಹಲಿಯಿಂದ ಬಂದ ನಿಯೋಗದವರಿಗೆ ರಾಜ್ಯ ಬಿಜೆಪಿ ಕೋರ್ ಕಮಿಟಿಯವರಿಗೆ ತಿಳಿಸಿದ್ದೇನೆ. ರಾಜ್ಯದ 25 ಕ್ಷೇತ್ರದಲ್ಲಿ ಈ ಚುನಾವಣೆ ನಡೆಯಲಿದೆ. ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೋರ್ ಕಮಿಟಿಗೆ ನೀಡಿದ್ದಾರೆ. ಈ ಪಟ್ಟಿ ಕೇಂದ್ರ ನಾಯಕರ ಕೈ ಸೇರಲಿದ್ದು, ಇನ್ನೆರಡು ದಿನಗಳಲ್ಲಿ ಅಂತಿಮ ಹೆಸರು ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಬಿಟ್ ಕಾಯಿನ್ ಕೇಸ್ ನಲ್ಲಿ ಬಿಜೆಪಿಯವರಿರುವ ಬಗ್ಗೆ ಒಂದು ಪೀಸ್ ದಾಖಲೆ ನೀಡಿ
ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿಯ ಯಾರಾದರೂ ಇದ್ದರೆ ಒಂದು ತುಂಡು ದಾಖಲೆ ನೀಡಲಿ ಎಂದು ಈಶ್ವರಪ್ಪ ಚಾಲೆಂಜ್ ಮಾಡಿದರು. 
ಕಾಂಗ್ರೆಸ್ ನವರಿಗೆ ಮಾಡಲು ಕೆಲಸವಿಲ್ಲ. ಅದಕ್ಕಾಗಿಯೇ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಹಿಂದೆಯೂ ಈ ರೀತಿಯಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆಂದು ಅಧಿಕಾರ ಕಳೆದುಕೊಂಡರು. ಈಗ ಗೌರವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ CLICK 

https://www.suddikanaja.com/2021/10/19/bs-yediyurappa-statement-about-sidelining-in-bjp/

error: Content is protected !!