ಶಿವಮೊಗ್ಗ ಮೃಗಾಲಯಕ್ಕೆ 1.2 ಟನ್ ಗಾತ್ರದ ನೀರು ಕುದುರೆ ಆಗಮನ, ಹೊಸ ಅತಿಥಿಗೆ ಭರ್ಜರಿ ರೆಸ್ಪಾನ್ಸ್

 

 

ಸುದ್ದಿ ಕಣಜ.ಕಾಂ | DISTRICT | TOURISM 
ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಶಿವಮೊಗ್ಗ ಮೃಗಾಲಯ ಮತ್ತು ಸಫಾರಿಗೆ ಹೊಸ ಅತಿಥಿಯ ಆಗಮನವಾಗಿದ್ದು, ಜನರಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಶಿವಮೊಗ್ಗ ಮೃಗಾಲಯ ಇತಿಹಾಸದಲ್ಲಿಯೇ ಇದುವರೆಗೆ ನೀರು ಕುದುರೆ (hippopotamus) ತಂದಿರಲಿಲ್ಲ. ಇದೇ ಮೊದಲ ಸಲ ಮೈಸೂರಿನಿಂದ ತರಲಾಗಿದೆ.

ಮೈಸೂರು ಮೃಗಾಲಯದಿಂದ ಕೊಡುಗೆಯಾಗಿ ಶಿವಮೊಗ್ಗಕ್ಕೆ ನೀರು ಕುದುರೆಯನ್ನು ನೀಡಲಾಗಿದೆ. ಮೂರುವರೆ ವರ್ಷದ ದಿವಾ ಎಂಬ ಗಂಡು ನೀರು ಕುದುರೆಯನ್ನು ತರಲಾಗಿದ್ದು, 1.2 ಟನ್ ತೂಕ ಇದೆ. ಮೂರು ದಿನಗಳ ಹಿಂದೆ ಮೃಗಾಲಯಕ್ಕೆ ತರಲಾಗಿದ್ದು, ನಿನ್ನೆಯಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

ಮೈಸೂರು, ಬನ್ನೇರುಘಟ್ಟದಲ್ಲಷ್ಟೇ ಇತ್ತು
ಇದು ಮೂಲತಃ ಆಫ್ರಿಕನ್ ಪ್ರಾಣಿಯಾಗಿದ್ದು, ಸಸ್ಯಹಾರಿಯಾಗಿದೆ. ಇದುವರೆಗೆ ರಾಜ್ಯದ ಮೈಸೂರು ಮತ್ತು ಬನ್ನೇರುಘಟ್ಟದಲ್ಲಿ ಮಾತ್ರ ಇತ್ತು. ಈಗ ಶಿವಮೊಗ್ಗಕ್ಕೆ ತಂದಿದ್ದು, ಸಾರ್ವಜನಿಕರ ಕಣ್ಮನ ಸೆಳೆಯಲಿದೆ.
ಶಿವಮೊಗ್ಗ ಮೃಗಾಲಯದಲ್ಲಿ ದಿವಾಗೋಸ್ಕರ ಪ್ರತ್ಯೇಕ ಎನ್‍ಕ್ಲೋಸರ್ ಮಾಡಲಾಗಿದ್ದು, ಅದರಲ್ಲಿಯೇ ಅದನ್ನು ಇಡಲಾಗಿದೆ. ಇನ್ನೊಂದು ಹೆಣ್ಣು ನೀರು ಕುದುರೆ ನೀಡುವಂತೆ ಮನವಿ ಮಾಡಲಾಗಿದ್ದು, ಕೊಟ್ಟಲ್ಲಿ ಶಿವಮೊಗ್ಗಕ್ಕೆ ಇನ್ನೊಂದು ನೀರು ಕುದುರೆ ಬರಲಿದೆ.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/07/16/lion-safari/

error: Content is protected !!