ತ್ರಿಪುರದಲ್ಲಿ ಮುಸ್ಲಿಮರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

 

 

ಸುದ್ದಿ ಕಣಜ.ಕಾಂ | DISTRICT | PROTEST
ಶಿವಮೊಗ್ಗ: ತ್ರಿಪುರದಲ್ಲಿ ಮುಸ್ಲಿಂ ಸಮುದಾಯದವರ ಮೇಲೆ ನಡೆದ ಹಲ್ಲೆ ಪ್ರಕರಣ ಖಂಡಿಸಿ ಸುನ್ನಿ ಜಮಾಯತ್ ವುಲ್ ಉಲೇಮಾ ಕಮಿಟಿಯಿಂದ ಸೋಮವಾರ ನಗರದ ಈದ್ಗಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು.
ತ್ರಿಪುರ ರಾಜ್ಯದ ಅಗರ್ತಲಾದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ಮಾಡಲಾಗಿದೆ. ಈ ಮೂಲಕ ದೇಶದಲ್ಲಿ ಕೋಮುಗಲಭೆ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

FOLLOW US copy

ವಸೀಂ ರಿಜ್ವೆ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವಸೀಂ ರಿಜ್ವೆ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಸಮಿತಿಯ ಅಧ್ಯಕ್ಷ ಇಕ್ಬಾಲ್ ಹಬೀಬ್ ಸೇಠ್, ಕಾರ್ಯದರ್ಶಿ ಏಜಾಜ್ ಪಾಷಾ, ಪ್ರಮುಖರಾದ ಅಬ್ದುಲ್ ಸತ್ತಾರ್, ಅಫ್ತಾಬ್ ಫರ್ವೀಜ್, ಮುನಾವರ್ ಪಾಷಾ, ಅನ್ಸರ್ ಅಹಮ್ಮದ್, ಮುಫ್ತಿ ಅಕಿಲ್ ರಾಜ್, ಖಾಜಿ ಅಶ್ರಫ್ ಸಾಬ್ ಉಪಸ್ಥಿತರಿದ್ದರು.

error: Content is protected !!