ರಾಜ್ಯದಲ್ಲಿ ಒಮಿಕ್ರಾನ್ ದಾಳಿ, ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

 

 

ಸುದ್ದಿ ಕಣಜ.ಕಾಂ | KARNATKA | POLITICAL NEWS
ಶಿವಮೊಗ್ಗ: ವಿಧಾನ ಪರಿಷತ್ ಚುನಾವಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಪಾಲ್ಗೊಂಡು ಶಿವಮೊಗ್ಗದಲ್ಲಿಯೇ ತಂಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ಬೆಳಗ್ಗೆ ಬೆಂಗಳೂರಿಗೆ ತೆರಳುವ ಮುನ್ನ ಹೊಸ ಬಾಂಬ್ ಸಿಡಿಸಿದ್ದಾರೆ.

ಸಿದ್ದರಾಮಯ್ಯ ನೀಡಿರುವ ಹೇಳಿಕೆ ಏನು?

ಇಡೀ ದೇಶದಲ್ಲಿಯೇ ಒಮಿಕ್ರಾನ್ ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದೆ. ಇದರ ಹಿಂದೆ ಭ್ರಷ್ಟಾಚಾರವಿದೆ ಎಂದು ಸಿದ್ದರಾಮಯ್ಯ ಆರೋಪಿದರು.
ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಪತ್ತೆ ಹಿನ್ನೆಲೆಯಲ್ಲಿ ವಿದೇಶದಿಂದ ಬಂದವರು ತಲೆಮರೆಸಿಕೊಂಡಿದ್ದಾರೆ. ಇದರಿಂದ ಏರ್ ಪೋರ್ಟ್ ನಲ್ಲಿ ಭ್ರಷ್ಟಾಚಾರ ಇರುವ ಬಗ್ಗೆ ಅನುಮಾನ ಮೂಡುತ್ತದೆ. ಹೀಗಾಗಿಯೇ ಬಂದ ಪ್ರಯಾಣಿಕರು ಮಿಸ್ಸಿಂಗ್ ಆಗಿದ್ದಾರೆ ಎಂದು ಹೇಳಿದರು.
ಗೃಹ ಸಚಿವರಿಗೆ ಹುದ್ದೆ ನಿರ್ವಹಣೆ ಮಾಡಲಾಗದಿದ್ದರೆ ರಾಜೀನಾಮೆ ನೀಡಲಿ
ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಒಂದುವೇಳೆ ಗೃಹ ಖಾತೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದಾದರೆ ರಾಜೀನಾಮೆ ನೀಡಲಿ. ಅದನ್ನು ಬಿಟ್ಟು ಪೊಲೀಸರ ಮೇಲೆ ಹರಿಹಾಯ್ದರೆ ಹೇಗೆ. ಅವರ ಇಲಾಖೆಯಲ್ಲಿ ಭ್ರಷ್ಟಾಚಾರ ನಾರುತ್ತಿದೆ. ಅದು ಈಗ ಅವರಿಗೆ ಮನವರಿಕೆ ಆಗಿದೆ ಎಂದು ಟೀಕಿಸಿದರು.

https://www.suddikanaja.com/2021/01/27/siddaramaiah-visit-to-hunasodu-village/

error: Content is protected !!